ಮಡಿಕೇರಿ ಡಿ.8 : ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 67 ನೇ ‘ಮಹಾ ಪರಿನಿರ್ವಾಣ ದಿನ’ವನ್ನು ಆಚರಿಸಲಾಯಿತು.
ನಗರಸಭೆ ಪೌರಾಯುಕ್ತ ವಿಜಯ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಅಂಬೇಡ್ಕರ್ ಅವರ ವಿಚಾರಧಾರೆ ತಿಳಿಸಿಕೊಟ್ಟರು.
ತಾಲ್ಲೂಕಿನ ಸಮಾನ ಮನಸ್ಕರು, ಸಮಾಜ ಚಿಂತಕರು, ಎಲ್ಲ ಸರ್ವ ಜನಾಂಗ ಸೇರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.
ಪ್ರಮುಖರಾದ ಮೋಹನ್ ಮೌರ್ಯ, ಹುಸೇನ್, ಜನಾರ್ಧನ್, ಜಯರಾಮ್, ಪ್ರೇಮಕುಮಾರ್, ಚಂದ್ರಮೌಳಿ ಹಾಗೂ ಅಶೋಕಪುರ ಹಾಗೂ ಉಕ್ಕುಡ ಗ್ರಾಮಸ್ಥರು ಸೇರಿ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.
ವಕೀಲರು ಹಾಗೂ ಚಿಂತಕರಾದ ಕುನ್ನಿ ಅಬ್ದುಲ್ಲಾ, ಪ್ರಮುಖರಾದ ಹರೀಶ್ ಕಾಳಯ್ಯ ಮತ್ತು ಡಿಎಸ್‍ಎಸ್ ದಿವಾಕರ್, ಜಿ.ಎಸ್.ವಿನಯ್ ಕುಮಾರ್, ಹಿರಿಯರಾದ ಪ್ರೊ.ಅಥಿನಿ ಮಹದೇವ, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಕುಮಾರ್, ಶಿಕ್ಷಣ ಅಧಿಕಾರಿ ಕೃಷ್ಣಪ್ಪ, ಇತರರು ಇದ್ದರು.










