ಮಡಿಕೇರಿ ಡಿ.8 : ಪಾನ್ ಇಂಡಿಯಾ ಪಾರುಗಾಣಿಕಾ ಮತ್ತು ಮಕ್ಕಳ ಹಾಗೂ ಹದಿಹರೆಯದ ಕಾರ್ಮಿಕರ ಪುನರ್ವಸತಿ ಅಭಿಯಾನದಡಿ ರಕ್ಷಣಾ ಕಾರ್ಯಾಚರಣೆಯ ಅಂಗವಾಗಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಗ್ರಾಮದಲ್ಲಿ ಇತರೆ ಇಲಾಖಾ (ಹೋಬಳಿ ಮಟ್ಟದ ಟಾಸ್ಕ್ ಫೋರ್ಸ್) ಅಧಿಕಾರಿಗಳನ್ನು ಒಳಗೊಂಡಂತೆ ಬಾಲ್ಯಾವಸ್ಥೆ ಹಾಗೂ ಕಿಶೋರವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಅಡಿ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಬಾಲ/ ಹದಿಹರೆಯ ಕಾರ್ಮಿಕರ ತಪಾಸಣೆ ಕೈಗೊಳ್ಳಲಾಯಿತು.
ಈ ಸಂದರ್ಭ ವಿವಿಧ ಸಂಸ್ಥೆಯ ಮಾಲೀಕರಿಗೆ ಸ್ಟಿಕರ್ಸ್ ಹಾಗೂ ಕರಪತ್ರಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟಿ, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಶಿವಕುಮಾರ್, ಚೇರಂಬಾಣೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್, ಗ್ರಾಮ ಲೆಕ್ಕಿಗರಾದ ರವಿಚಂದ್ರ, ಕ್ಷೇತ್ರ ಶಿಕ್ಷಣ ಅಧಿಕಾರಿ ದೊಡ್ಡೇಗೌಡ, ವಿಶೇಷ ಮಕ್ಕಳ ಪೊಲೀಸ್ ಘಟಕದ ಸುಮತಿ, ಮಕ್ಕಳ ಸಹಾಯವಾಣಿ ಘಟಕದ ಸಂಯೋಜಕರಾದ ನವೀನ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಆರ್.ಶೀರಾಜ್ ಅಹಮದ್ ಇತರರು ಉಪಸ್ಥಿತರಿದ್ದರು.
ಗ್ರಾಮಕ್ಕೆ ಭೇಟಿ ಪರಿಶೀಲನೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಂದ ದೂರಿನ ಅನ್ವಯ ಮಡಿಕೇರಿ ತಾಲೂಕಿನ ಬಿ.ಬಾಡಗ ಗ್ರಾಮಕ್ಕೆ ತೆರಳಿ ಅಲ್ಲಿಯ ಸ್ಥಳೀಯರೊಬ್ಬರ ಕಾಫಿ ತೋಟ ಹಾಗೂ ಮನೆಗೆ ತೆರಳಿ ತಪಾಸಣೆ ಕೈಗೊಳ್ಳಲಾಯಿತು ಈ ಸಂದರ್ಭ ಯಾವುದೇ ಬಾಲ್ಯಾವಸ್ಥೆಯ/ ಕಿಶೋರವಸ್ಧೆಯ ಕಾರ್ಮಿಕರು ಕಂಡು ಬಂದಿರುವುದಿಲ್ಲ.
ಈ ಕಾರ್ಯಾಚರಣೆಯಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟಿ, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಶಿವಕುಮಾರ್, ಚೇರಂಬಾಣೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್, ಗ್ರಾಮ ಲೆಕ್ಕಿಗರಾದ ರವಿಚಂದ್ರ, ಕ್ಷೇತ್ರ ಶಿಕ್ಷಣ ಅಧಿಕಾರಿ ದೊಡ್ಡೇಗೌಡ, ವಿಶೇಷ ಮಕ್ಕಳ ಪೊಲೀಸ್ ಘಟಕದ ಸುಮತಿ, ಮಕ್ಕಳ ಸಹಾಯವಾಣಿ ಘಟಕದ ಸಂಯೋಜಕರಾದ ನವೀನ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಆರ್.ಶೀರಾಜ್ ಅಹಮದ್ ಇತರರು ಉಪಸ್ಥಿತರಿದ್ದರು.
ವಿಶೇಷ ಅರಿವು ಕಾರ್ಯಕ್ರಮ: ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮ ಹಾಗೂ ಶಿಕ್ಷಣದ ಮಹತ್ವದ ವಿಷಯವಾಗಿ, ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಅರಿವು ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟಿ, ಕ್ಷೇತ್ರ ಶಿಕ್ಷಣ ಅಧಿಕಾರಿ ದೊಡ್ಡೇಗೌಡ, ವಿಶೇಷ ಮಕ್ಕಳ ಪೊಲೀಸ್ ಘಟಕದ ಸುಮತಿ, ಮಕ್ಕಳ ಸಹಾಯವಾಣಿ ಘಟಕದ ಸಂಯೋಜಕರಾದ ನವೀನ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಆರ್.ಶೀರಾಜ್ ಅಹಮದ್ ಇತರರು ಉಪಸ್ಥಿತರಿದ್ದರು.










