ಮಡಿಕೇರಿ ಡಿ.9 : ಮೂಲತಃ ಸುಂಟಿಕೊಪ್ಪದ ನಾಕೂರು ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಬ್ಲಡ್ ಫ ಕಾಫಿ ತೋಟದ ಮಾಲೀಕ ಹಾಗೂ ಪ್ರತಿಷ್ಟಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿದ್ದ ಪಾಂಡಂಡ ಅಪ್ಪಣ್ಣ ಸುಬ್ಬಯ್ಯ( 53) ಅವರು ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಶನಿವಾರ) ಮಡಿಕೇರಿಯ ಸ್ಟುವರ್ಟ್ ಹಿಲ್ಸ್ ನಲ್ಲಿ ನಡೆಯಲಿದೆ.








