ವಿರಾಜಪೇಟೆ ಡಿ.9 : ಮೈಸೂರಿನಲ್ಲಿ ನಡೆದ 6ನೇ ಜಿ ಕೆ ಎ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನ 13 ರಿಂದ 14 ವರ್ಷದ ಬಾಲಕಿಯರ ವಿಭಾಗದ ಕತಾ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅಪ್ಸರಾ ಜಯನ್ ದ್ವಿತೀಯ ಸ್ಥಾನ ಹಾಗೂ ಕುಮಿತೆ ಯಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.
ವಿಜೇತ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ. ಶಾಲಾ ಸಂಯೋಜಕಿ ಎನ್.ಬಿ.ಚೈತ್ರಾ ಹಾಗೂ ದೈಹಿಕ ಶಿಕ್ಷಕಿ ಬಿ.ಬಿ.ಲಾವಣ್ಯ ಉಪಸ್ಥಿತರಿದ್ದರು.









