ಸೋಮವಾರಪೇಟೆ ಡಿ.9 : ಬಸ್ಸಿನೊಳಗೆ ಕೇರೆ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕೂಡ್ಲಿಪೇಟೆಯಿಂದ ಸೋಮವಾರಪೇಟೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಪಶುಪತಿ ಬಸ್ ಪಟ್ಟಣಕ್ಕೆ ಬಂದ ಸಂದರ್ಭ ಇಂಜಿನ್ ಸಮೀಪ ಹಾವೊಂದು ಕಾಣಿಸಿಕೊಂಡಿತು. ಇದರಿಂದ ಕೆಲಕಾಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ನೇಕ್ ರಘು ಹಾವನ್ನು ಹಿಡಿದು ರಕ್ಷಿಸಿದರು.
ಹಾವುಗಳನ್ನು ಕಂಡರೆ ಕೊಲ್ಲದೆ ಈ ಸಂಖ್ಯೆಗೆ 9844558693 ಕರೆ ಮಾಡುವಂತೆ ಸ್ನೇಕ್ ರಘು ಮನವಿ ಮಾಡಿದ್ದಾರೆ.








