ಮಡಿಕೇರಿ ಡಿ.9 : ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್ ವೊಂದರಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ರೆಸಾರ್ಟ್ ನ ಕೋಣೆಯಲ್ಲಿ ಪತಿ, ಪತ್ನಿಯ ಮೃತದೇಹ ನೇಣು ಬಿಗದ ಸ್ಥಿತಿಯಲ್ಲಿದ್ದು, ಪುತ್ರಿಯ ಮೃತದೇಹ ಹಾಸಿಗೆಯಲ್ಲಿದೆ. ಕೇರಳ ರಾಜ್ಯದ ಕೊಲ್ಲಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37), ಅವರ ಪತ್ನಿ ಜಿಬಿ ಅಬ್ರಹಾಂ (35) ಹಾಗೂ 8 ವರ್ಷದ ಪುತ್ರಿ ಮೃತಪಟ್ಟಿದ್ದಾರೆ. ಪುತ್ರಿಯನ್ನು ಉಸಿರುಗಟ್ಟಿಸಿ ಕೊಂದು ದಂಪತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಸಂಜೆ ಪ್ರವಾಸಕ್ಕೆಂದು ಕೊಡಗಿಗೆ ಬಂದವರು ರೆಸಾರ್ಟ್ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.
ಕೇರಳದಿಂದ ಕುಟುಂಬದ ಸದಸ್ಯರು ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸ್ಥಳಕ್ಕೆ ಮಡಿಕೇರಿ ಗಾಮಾಂತರ ಠಾಣಾ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.







