ವಿರಾಜಪೇಟೆ ಡಿ.11 : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಐಎಂಐಟಿ ಘಟಕದ ವತಿಯಿಂದ ವಿರಾಜಪೇಟೆ ಸೆಂಟ್ ಆನ್ಸ್ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಮಸ್ಟರಿಂಗ್ ಮೆಷಿನ್ ಲರ್ನಿಂಗ್, ಪ್ರಾಕ್ಟಿಕಲ್ ಅಪ್ರೋಚ್ ಬಗ್ಗೆ ಕಾರ್ಯಾಗಾರ ನಡೆಯಿತು.
ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ. ಶ್ರೀನಿವಾಸ್ ಬಿ. ಎಲ್. ಹಾಗೂ ಎಂ.ಎಸ್.ಸಿ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಜಾಹ್ನವಿ, ದೃತಿ, ದಿಶಾ, ಭೂಮಿಕಾ, ರಿಯೋನ, ಅಲರೊಯ್ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಯಂತ್ರ ಕಲಿಕೆ ಮತ್ತು ಕೃತಕ ಬುದ್ದಿಮತ್ತೆ ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.
ಯಂತ್ರ ಕಲಿಕೆ ಅಪ್ಲಿಕೇಶನ್, ಪರಿಕಲ್ಪನೆಗಳ ಬಗ್ಗೆ ವಿದ್ಯಾರ್ಥಿಗಳು ಅರಿತರು. ಮಾತ್ರವಲ್ಲದೆ ಪ್ರಸ್ತುತದಲ್ಲಿ ಎ.ಐ.ನ ಪಾತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಯಿತು. ಮತ್ತು ತಂತ್ರಜ್ಞಾನದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ, ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಸೌಮ್ಯ ಸೋಮರಾಜ್, ಉಪನ್ಯಾಸಕರು ಹಾಜರಿದ್ದರು.










