ಮಡಿಕೇರಿ ಜ.8 : ಕೊಡಗು ಜಿಲ್ಲಾ ಪೊಲೀಸ್, ಲಯನ್ಸ್ ಕ್ಲಬ್ ಮಡಿಕೇರಿ, ರೋಟರಿ ಮಿಸ್ಟರಿ ಹಿಲ್ಸ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ಮಡಿಕೇರಿಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ತಟೆಗಟ್ಟುವ ಕುರಿತು ಜಾಗೃತಿ ಜಾಥಾ ನಡೆಯಿತು.
ಮಡಿಕೇರಿಯ ಗದ್ದುಗೆಯಿಂದ ಆರಂಭವಾದ ಜಾಥಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಚಾಲನೆ ನೀಡಿದರು.
ಮಡಿಕೇರಿಯ ಗದ್ದುಗೆಯಿಂದ ಆರಂಭವಾದ ಮೇರವಣಿಗೆ ಐಜಿ ಸರ್ಕಲ್, ಕಾಲೇಜು ರಸ್ತೆ, ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ, ಮುತ್ತಣ್ಣ ಸರ್ಕಲ್ ಮುಕಾಂತರ ಸಾಗಿ ರಾಜಾಸೀಟಿನಲ್ಲಿ ಕೊನೆಗೊಂಡಿತು. ಮೆರವಣಿಗೆಯ ಉದ್ದಕ್ಕೂ ಮಾದಕ ವಸ್ತುಗಳನ್ನ ತೆಜಿಸುವಂತೆ ಘೋಷಣೆಗಳು ಮೊಳಗಿತು. ಜಾಥಕ್ಕೆ ಆಟೋ, ಟ್ಯಾಕ್ಸಿ ಲಾರಿ ಮಾಲೀಕರು ಹಾಗೂ ಚಾಲಕರು ಸಹಕಾರ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಇತ್ತಿಚೀನ ದಿನಗಳಲ್ಲಿ ಹೆಚ್ಚಿನ ಯುವಕರು ಮಾದಕ ವಸ್ತುಗಳ ಚಟಕ್ಕೆ ಒಳಗಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾಕಷ್ಟು ಅಭಿಯಾನಗಳನ್ನ ನಡೆಸಿಕೊಂಡು ಬರಲಾಗುತ್ತಿದ್ದರೂ ಕೂಡ ಯುವ ಪಿಳೀಗೆ ದುಷ್ಚಟಗಳಿಗೆ ಬಲಿಯಾಗುತ್ತಲೆ ಇದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಿಂದಿನ ವರ್ಷ 101 ಮಾದಕ ವಸ್ತು ಪ್ರಕರಣಗಳನ್ನ ಭೇಧಿಸಿದ್ದು, 234 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಇಂತಹ ಕೆಲಸಗಳನ್ನ ತಡೆಗಟ್ಟಲು ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರವಲ್ಲ ಸಾಧ್ಯವಿಲ್ಲ ಸಾರ್ವಜನಿಕರ ಸಹಕಾರ ಕೂಡ ಅಗತ್ಯ. ಆಗ ಮಾತ್ರ ಇಂತ ಮಾದಕ ವಸ್ತುಗಳಿಂದ ಯುವ ಪೀಳಿಗೆಯನ್ನು ಮಾದಕ ವಸ್ತುಗಳಿಂದ ದೂರವಿಡಲು ಸಾಧ್ಯ ಹಿಗಾಗಿ ಪೊಲೀಸರ ಜೊತೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯ ಎಂದು ಹೇಳಿದರು.









