ಮಡಿಕೇರಿ ಜ.8 : ಕೊಡಗು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಜ.24 ಮತ್ತು 25 ರಂದು ಕೊಡಗು ಜಿಲ್ಲಾ ಮಟ್ಟದ ಮೇಲಾಟ ಕ್ರೀಡಾ ಸ್ಪರ್ಧೆ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ವಿ.ಲೋಕೇಶ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, 14 ಮತ್ತು 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ಕೂಡಿಗೆ ಕ್ರೀಡಾಶಾಲೆಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಆಯ್ಕೆಯಾದ ಅರ್ಹ ಕ್ರೀಡಾಪಟುಗಳು ಫೆ.16 ರಿಂದ 18ರ ವರೆಗೆ ಅಹಮದಾಬಾದ್-ಗುಜರಾತ್ ಯುನಿವರ್ಸಿಟಿ ನವರಂಗಪುರದ ಸರ್ದಾರ್ ಪಾಟೀಲ್ ಸ್ಪೋರ್ಟ್ಸ್ ಸಿಟಿಯಲ್ಲಿ ನಡೆಯಲಿರುವ 19ನೇ ರಾಷ್ಟ್ರೀಯ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಮೀಟ್ ನಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದ್ದಾರೆ.
:: ವಯೋಮಿತಿ :: 14 ವರ್ಷದೊಳಗಿನ ಬಾಲಕ, ಬಾಲಕಿಯರು 19.02.2010 ರಿಂದ 18.02.2012 ರೊಳಗೆ ಹಾಗೂ 16 ವರ್ಷದೊಳಗಿನ ಬಾಲಕ, ಬಾಲಕಿಯರು 19.02.2008 ರಿಂದ 18.02.2010 ರೊಳಗೆ ಜನಿಸಿದವರಾಗಿರಬೇಕು.
:: ಸ್ಪರ್ಧೆಗಳು :: (ಟ್ರಯಥ್ಲಾನ್ ಎ) 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಉದ್ದ ಜಿಗಿತ ಮತ್ತು ಎತ್ತರ ಜಿಗಿತ, (ಟ್ರಯಥ್ಲಾನ್ ಬಿ), ಉದ್ದ ಜಿಗಿತ, ಬ್ಯಾಕ್ ಥ್ರೋ (1 ಕೆ.ಜಿ.ಶಾಟ್‍ಪುಟ್), 60 ಮಿ ಉದ್ದ ಜಿಗಿತ ಮತ್ತು (ಟ್ರಯಥ್ಲಾನ್ ಸಿ) ಉದ್ದ ಜಿಗಿತ ಸ್ಪರ್ಧೆ ನಡೆಯಲಿದೆ.
16 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಎತ್ತರ ಜಿಗಿತ, ಉದ್ದಜಿಗಿತ, 4 ಕೆ.ಜಿ ಮತ್ತು 3 ಕೆ.ಜಿ. ಭಾರದ ಗುಂಡು ಎಸೆತ ಹಾಗೂ ಜಾವಲಿನ್ ಎಸೆತ ಸ್ಪರ್ಧೆ ನಡೆಯಲಿದೆ.
ಪೆಂಟಾಥ್ಲಾನ್ ನಲ್ಲಿ ಉದ್ದ ಜಿಗಿತ ಮತ್ತು ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆ.
ಎಎಫ್ ಐ ಯುಐಡಿ ಸಂಖ್ಯೆ ಹೊಂದಿರುವವರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ. ಆಸಕ್ತರು ಜ.21 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಎಂ.ವಿ.ಲೋಕೇಶ್, ಕ್ರಿಂಗ್ಸ್ ಗ್ರೂಪ್, ಆಂಜನೇಯ ದೇವಾಲಯದ ಹಿಂಭಾಗ, ಬ್ರಾಹ್ಮಣರ ಬೀದಿ, ಮಡಿಕೇರಿ : 9606333051, 8310211987, ಅಂತೋಣಿ ಡಿಸೋಜ 9448448603 ನ್ನು ಸಂಪರ್ಕಿಸಬಹುದಾಗಿದೆ.









