ನಾಪೋಕ್ಲು ಜ.8 : ಕೊಳಕೇರಿಯ ಕೂವಲೆ ಕಾಡು ಜಾಗದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಾಪೋಕ್ಲು ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ನಾಪೋಕ್ಲು ಗ್ರಾಮದ ನಿವಾಸಿ ಸಲೀಂ ಹಾಜಿ ಅವರು, ಕೊಳಕೇರಿಯ ಕೂವಲೆ ಕಾಡಿನಲ್ಲಿ ಸ್ಥಳ ದಾನ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಒದಗಿಸಲಾದ ಹದಿನೈದು ಲಕ್ಷ ರೂಪಾಯಿ ಹಾಗೂ ನರೇಗ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡಲಾದ 5 ಲಕ್ಷ ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ವನಜಾಕ್ಷಿ ಹೇಳಿದರು.
ಈ ಸಂದರ್ಭ ಪಂಚಾಯಿತಿ ಉಪಧ್ಯಕ್ಷ ಹೇಮ ಅರುಣ್, ಗ್ರಾ.ಪಂ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ










