ಸುಂಟಿಕೊಪ್ಪ ಜ.8 : ಕರ್ನಾಟಕದಲ್ಲಿ ಹುಟ್ಟಿರುವ ನಾವುಗಳು ಮೊದಲು ಕನ್ನಡವನ್ನು ಕಲಿತು ಇತರರಿಗೆ ಕನ್ನಡವನ್ನು ಕಲಿಸಿ ಬೆಳೆಸಲು ಮುಂದಾಗಬೇಕೆಂದು ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ವ್ಯವಸ್ಥಾಪಕ ವಂ.ರೇ.ಫಾ.ಅರುಳ್ ಸೇಲ್ವಕುಮಾರ್ ಹೇಳಿದರು.
ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಕರ್ನಾಟಕ 50ರ ಅಂಗವಾಗಿ ಹೋಬಳಿ ಮಟ್ಟದ ಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡವನ್ನು ಕಲಿತು ಬೆಳೆಸಲು ನಿರ್ಧರಿಸಿದ್ದು, ಅದರಂತೆ ಮಕ್ಕಳು ಕನ್ನಡವನ್ನು ಕಲಿತು ಬೆಳೆಸುವುದು ನಮ್ಮೆಲ್ಲಾರಿಗೂ ಸ್ಫೂರ್ತಿದಾಯಕಗಿದೆ ಅದ್ದರಿಂದ ಎಲ್ಲಾರೂ ಕನ್ನಡವನ್ನು ಬೆಳೆಸುವ, ಕರ್ನಾಟಕ ಉಳಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸೆಬಾಸ್ಟೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ ಪ್ಲಾಂಟೇಶನ್ ವ್ಯವಸ್ಥಾಪಕ ಶಶಾಂಕ್, ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯ ಸೇಲ್ವರಾಜ್, ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾವತಿ, ಸು.ಹೋ.ಕ.ಸಾ.ಪ. ಕೋಶಾಧಿಕಾರಿ ಸತೀಶ್ ಶೇಟ್, ಬಿ.ಎಸ್.ಆಶೋಕ್ ಶೇಟ್, ಸು.ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಗೀತಾ ಬಸಪ್ಪ, ವಿವಿಧ ಶಾಲೆಗಳ ಸಹಶಿಕ್ಷಕರು ಹಾಜರಿದ್ದರು.ಪ್ರತಿ ಶಾಲಾ ಮಟ್ಟದಲ್ಲಿ ಸುವರ್ಣ ಕರ್ನಾಟಕ 50ರ ಅಂಗವಾಗಿ ಸ್ಪರ್ಧೆಗಳನ್ನು ಶಾಲಾ/ಕಾಲೇಜುಗಳಲ್ಲಿ ನಡೆಸಲಾಗಿದ್ದು, ವಿಜೇತ ಮಕ್ಕಳಿಗೆ ಹೋಬಳಿ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಯಿತು.
ಈ ಸ್ಪರ್ಧೆಗೆ ಹೋಬಳಿಯ ವ್ಯಾಪ್ತಿಯ 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ, ಕಾನ್‍ಬೈಲ್, ಸುಂಟಿಕೊಪ್ಪ ಶಾಲೆಗಳ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತ್ಯೇಕವಾಗಿ ಕನ್ನಡ ನಾಡು ನುಡಿಗೆ ಸಂಬಂದಿಸಿದ ಭಾವ ಗೀತೆ ಗಾಯನ ಸ್ಪರ್ಧೆ, ಜಾನಪದ ಗೀತೆ ಗಾಯನ ಸ್ಪರ್ಧೆ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳ ಬಗ್ಗೆ ಪ್ರಬಂಧ ಸ್ಪರ್ಧೆ ಕನ್ನಡ ನಾಡು ನುಡಿಗೆ ಸಂಬಂದಿಸಿದ ಚಿತ್ರ ಕಲಾ ಸ್ಪರ್ಧೆ ನಡೆಯಿತು.
ಪ್ರಾಥಮಿಕ ಶಾಲಾ ವಿಭಾಗದ ಭಾವ ಗೀತೆ ಗಾಯನ ಸ್ಪರ್ಧೆಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆಯ ಕೆ.ಎಸ್.ಅನ್ವಿ ಪ್ರಥಮ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕಾನ್‍ಬೈಲ್ ಪಿ.ಜಿ.ರಂಜಿನಿ ದ್ವಿತೀಯ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕಾನ್‍ಬೈಲ್ ಎ.ಪುಣ್ಯ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.
ಪ್ರೌಢಶಾಲಾ ವಿಭಾಗದಲ್ಲಿ ಕೊಡರಹಳ್ಳಿಯ ಸುಂಟಿಕೊಪ್ಪ ನಾಡು ಶಾಲೆಯ ಎಂ.ಎ.ನಿಯಾಜ್ ಪ್ರಥಮ, ಸರಕಾರಿ ಪ್ರೌಢಶಾಲೆ ಕಾನ್‍ಬೈಲ್ ಎಚ್.ಜಿ.ಚಸ್ಮಿತ್ ದ್ವಿತೀಯ, ಶಾಂತಿನೀಕೇತನ ಪ್ರೌಢಶಾಲೆಯ ಎಸ್.ಧನ್ಯಶ್ರೀ ತೃತೀಯ ಸ್ಥಾನ ಗೆದ್ದುಕೊಂಡರು.
ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಆಲಿನಾ ಡಿಸೋಜ ಪ್ರಥಮ, ಸಂತಮೇರಿ ಆಂಗ್ಲ ಪಿಯು ಕಾಲೇಜಿನ ಎಚ್.ಎ.ಅನುಷ ದ್ವಿತೀಯ, ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಆಜ್ಮೀಯ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.
ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಗಳ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಇಸ್ನಾ ಪೆಬಿನ್ ಪ್ರಥಮ, ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ನಿವೇದ, ಅತ್ತೂರು ನಲ್ಲೂರು ಶಾಲೆಯ ಕೆ.ಎಂ.ಸಿಂಚನ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ಪ್ರೌಢಶಾಲಾ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕಾನ್‍ಬೈಲ್ ಪಿ.ಆರ್.ಶಾಕೀರ ಪ್ರಥಮ, ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಪ್ಲೋರಿಯ ರಾಡ್ರಿಗಸ್ ದ್ವಿತೀಯ, ಕೊಡರಹಳ್ಳಿಯ ಸುಂಟಿಕೊಪ್ಪ ನಾಡು ಶಾಲೆಯ ಎ.ಎಸ್.ಶ್ರೀಶಾ ತೃತೀಯ ಸ್ಥಾನ ಪಡೆದುಕೊಂಡರು.
ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ವಿಭಾಗದಲ್ಲಿ ಎಂ.ಜಿ ಶ್ವೇತಾ ಪ್ರಥಮ, ಸಂ. ಮೇ. ಪ.ಪೂ.ಕಾ. ಎಸ್.ಕೀರ್ತಿ ದ್ವಿತೀಯ, ಸಂ. ಮೇ. ಪ.ಪೂ.ಕಾ ಮೇಲಿಷ ಡಿಸೋಜ ತೃತೀಯ ಸ್ಥಾನಗಳನ್ನು ಪಡೆದುಕೊಂಡರು.
ಚಿತ್ರಕಲೆ ಸ್ಪರ್ಧೆ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಂಟಿಕೊಪ್ಪ ಸಂತ ಮೇರಿ ಶಾಲೆಯ ಮಹಮದ್ ಸುಹಾನ್ ಪ್ರಥಮ, ಶಾಂತಿನಿಕೇತನ ಶಾಲೆಯ ಸನಾತೀನಿಶೆಟ್ಟಿ ದ್ವಿತೀಯ, ಶಾಂತಿನಿಕೇತನ ಶಾಲೆಯ ಶಿವಪ್ರಸಾದ್, ಪ್ರೌಢಶಾಲೆ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಜಸ್ಮಿತ ಶ್ರೀಹರಿ ಪ್ರಥಮ, ಸಂತಮೇರಿ ಶಾಲೆಯ ಎಂ.ವಿಸ್ಮಯ್ ದ್ವಿತೀಯ, ಸಂತ ಮೆರಿ ಶಾಲೆಯ ರೂಮನ್ ತೃತೀಯ ಸ್ಥಾನಗಳನ್ನು ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಧುಮಿತ ಪ್ರಥಮ, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಆಯಿಷಾ ದ್ವಿತೀಯ, ಸರಕಾರಿ ಪದವಿಪೂರ್ವ ಕಾಲೇಜಿನ ಕಿಶೋರ್ ತೃತೀಯ ಸ್ಥಾನ ಗೆದ್ದುಕೊಂಡರು.
ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಪ್ರಣಮೀಯ ಪ್ರಥಮ, 7ನೇ ಹೊಸಕೋಟೆ ದೀಪ್ತಿ ಶಾಲೆಯ ಅಜ್ಮೀಯ ದ್ವಿತೀಯ,ಅತ್ತೂರು ನಲ್ಲೂರು ಶಾಲೆಯ ಶಾಹನ ತೃತೀಯ ಸ್ಥಾನ ಪಡೆದುಕೊಂಡರು.
ಪ್ರೌಢಶಾಲೆ ವಿಭಾಗದಲ್ಲಿ ಶಾಂತಿನಿಕೇತನ ಶಾಲೆಯ ಕೆ.ಪ್ರೀತಿ ಪ್ರಥಮ, ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಅನುಕುಮಾರಿ ದ್ವಿತೀಯ, ಶಾಂತಿನಿಕೇತನ ಶಾಲೆಯ ದಿಕ್ಷೀತ ತೃತೀಯ ಸ್ಥಾನ ಪಡೆದುಕೊಂಡರು. ಕಾಲೇಜು ವಿಭಾಗದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸಾನ ಪರ್ವಿನ್ ಪ್ರಥಮ, ಸರಕಾರಿ ಪದವಿಪೂರ್ವ ಕಾಲೇಜಿನ ಐಶ್ವರ್ಯ ದ್ವಿತೀಯ, ಸರಕಾರಿ ಪದವಿಪೂರ್ವ ಕಾಲೇಜಿನ ಮಹಮದ್ ಹರ್ಷದ್ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.








