ನಾಪೋಕ್ಲು ಜ.4 : ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಅಭಿಯಾನದ ಅಂಗವಾಗಿ ಅಯೋಧ್ಯ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯನ್ನು ಬೆಟ್ಟಗೇರಿಯಲ್ಲಿ ವಿತರಿಸಲಾಯಿತು.
ಪವಿತ್ರ ಮಂತ್ರಾಕ್ಷತೆ ಗೆ ಶ್ರೀ ಭಗವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಬೆಟ್ಟಗೇರಿ ಗ್ರಾಮದ ಹಿಂದೂ ಸಂಘಟನೆಗಳ ಪ್ರಮುಖರಿಗೆ ಹಸ್ತಾಂತರಿಸಲಾಯಿತು .
ಹಿಂದೂ ಸಂಘಟನೆಗಳ ಪ್ರಮುಖರು ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಮನೆ ಮನೆಗಳಿಗೆ ತೆರಳಿ ಕುಟುಂಬದ ಸದಸ್ಯರಿಗೆ ಪವಿತ್ರ ಮಂತ್ರಾಕ್ಷತೆಯನ್ನು ಶ್ರದ್ಧಾ ಭಕ್ತಿಯಿಂದ ವಿತರಿಸಿದರು.
ಅಲ್ಲದೆ ಜ.22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಉದ್ದೇಶ ಹಾಗೂ ಆಚರಣೆಯ ಬಗ್ಗೆ ಮಾಹಿತಿಯನ್ನು ನೀಡಿ ಮನವಿ ಮಾಡಿದರು.
ಈ ಸಂದರ್ಭ ಶ್ರೀ ರಾಮ ಭಕ್ತ ಸ್ವಯಂ ಸೇವಕರಾದ ಬೊಳ್ಳಿಯಂಡ ಮಂಜುನಾಥ್, ನೆಯ್ಯಣಿರ ಉಮೇಶ್, ಕಡ್ಲೇರ ತುಳಸಿ ಮೋಹನ್, ವಿ.ಟಿ.ಗಿರೀಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ









