ಕುಶಾಲನಗರ ಜ.9 : ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಹಸಿ ಶುಂಠಿ ವರ್ತಕರ ಸಂಘದ ಉದ್ಘಾಟನಾ ಸಮಾರಂಭ ಕುಶಾಲನಗರದಲ್ಲಿ ನಡೆಯಿತು.
ಸಂಘವನ್ನು ಉದ್ಘಾಟಿಸಿ ಮಾತನಾಡಿದ ಹಸಿ ಶುಂಠಿ ವರ್ತಕರ ಸಂಘದ ರಾಜ್ಯಾಧ್ಯಕ್ಷ ಸಾಗರ್ ಬಾಬು, ಹಸಿ ಶುಂಠಿ ವರ್ತಕರ ಹಿತರಕ್ಷಣೆಗಾಗಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಹಿಂದೆ ಚೀನಾದ ರೈತರು ಬೆಳೆದ ಶುಂಠಿಯ ಫಸಲನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡು ನಮ್ಮ ದೇಶದ ಶುಂಠಿ ಕೃಷಿಕರ ಹಿತವನ್ನು ಕಡೆಗಣಿಸಲು ಹೊರಟ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಹಸಿ ಶುಂಠಿ ವರ್ತಕರ ಸಂಘ ಬಲವಾದ ಹೋರಾಟ ರೂಪಿಸಿದ್ದರ ಫಲವಾಗಿ ಚೀನಾದ ಶುಂಠಿಯ ಆಮದನ್ನು ನಿಷೇಧಗೊಳಿಸಲಾಯಿತು ಎಂದು ವಿವರಿಸಿದರು.
ಈ ಸಂದರ್ಭ ಕೊಡಗು ಮೈಸೂರು ಹಸಿ ಶುಂಠಿ ವರ್ತಕರ ಸಂಘದ ಅಧ್ಯಕ್ಷ ಹೆಚ್.ಎನ್.ರಾಜಶೇಖರ್, ರಾಜ್ಯ ಸಂಘದ ಉಪಾಧ್ಯಕ್ಷ ವಿಶ್ವನಾಥ ಗೌಡ, ಮೊಹಮ್ಮದ್ ಅನೀಶ್, ತೌಫಿಕ್, ಖಜಾಂಚಿ ಮುನ್ನಾ, ದಿನೇಶ್ ಬಿ.ಎಲ್. ಯತೀಶ್, ಜನಾರ್ಧನ್, ರೇವಣ್ಣ, ಹಿನಾಯತ್ ಹಾಗೂ ಕೊಡಗು ಮೈಸೂರು ಜಿಲ್ಲೆಗಳ ಸಂಘದ ಪದಾಧಿಕಾರಿಗಳಾದ ಮುರುಳೀಧರ್, ಉಪಾಧ್ಯಕ್ಷರುಗಳಾದ ಕಬೀರ್ ಅಹಮದ್, ಮದನ್ ಶೆಟ್ಟಿ, ಖಜಾಂಚಿ ಖಾಲಿದ್ ಪಾಷಾ, ನಿರ್ದೇಶಕರಾದ ಕೆ.ಸಿ.ಸತ್ಯ, ಸಿ.ಎ.ರಾಜು, ಹಮೀದ್, ಇಬ್ರಾಹಿಂ, ಬಷೀರ್, ಮಣಜೂರು ಮಲ್ಲಿಕಾ ಮತ್ತಿತರರು ಹಾಜರಿದ್ದರು.









