ವಿರಾಜಪೇಟೆ ಜ.9 : ಡಾ. ಡಿ.ವೀರೇಂದ್ರ ಹೆಗ್ಗಡೆಯರು ಜ.13 ರವರೆಗೆ ಒಂದು ವಾರದ ಸ್ವಚ್ಛತಾ ಸಪ್ತಾಹ ಆಚರಿಸುವಂತೆ ಮಾರ್ಗದರ್ಶನ ನೀಡಿದ ಹಿನ್ನೆಲೆ ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಬಾಳುಗೋಡುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಶ್ರೀ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿ ಘಟಕದ ಪದಾಧಿಕಾರಿಗಳು ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.
ಮೇಲ್ವಿಚಾರಕ ನಾಗರಾಜ್, ವಿಪತ್ತು ತಂಡದ ಸಂಯೋಜಕಿ ರೇಖಾ ಗಣೇಶ್ ಮೋಹನ್, ರಂಜನ್, ಅರುಣ್, ಅಕ್ಷತ್, ಕವನ್, ಜ್ಯೋತಿ, ಎಸ್. ಸಬಿತ, ಜ್ಯೋತಿ, ಸುನಿಲ್ ಕುಟ್ಟಪ್ಪ ಭಾಗವಹಿಸಿದ್ದರು.









