ವಿರಾಜಪೇಟೆ ಜ.16 : ವಿರಾಜಪೇಟೆಯ ಸರ್ಕಾರಿ ಜೂನಿಯರ್ ಪ್ರೌಢಶಾಲಾ ಸಭಾಂಗಣದಲ್ಲಿ “ಓಜಸ್ವಿ ಫೌಂಡೇಶನ್ “ಹಾಗೂ” ಜಸ್ಟ್ ರೋಬೋಟಿಕ್ಸ್” ಅವರ ಸಹಭಾಗಿತ್ವದಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ರೋಬೋಟಿಕ್ಸ್ ವಿಜ್ಞಾನ ತರಬೇತಿ ಪಡೆದ ವಿದ್ಯಾರ್ಥಿಗಳ ವತಿಯಿಂದ 8ನೇ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಸೈನ್ಸ್ ಎಂಬ ಹೊಸ ತಂತ್ರಜ್ಞಾನದ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕಾವೇರಿ ಶಾಲೆಯ ಅಧ್ಯಕ್ಷ ಸುದೇಶ್ ಅವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ನುಡಿ ನುಡಿದರು. ಓಜಸ್ವಿ ಫೌಂಡೇಶನ ಟ್ರಸ್ಟಿ ಕವಿತಾ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಜಸ್ಟ್ ರೋಬೋಟಿಕ್ಸ್ ವಿಭಾಗದ ಸಿ ಇ ಓ ಬ್ರಿಜೇಶ್, ಕುತೂಹಲಕಾರಿಯಾದ ಹೊಸ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾದ ಮಾಹಿತಿಯನ್ನು ನೀಡಿದರು.
ನಂತರ ಗುಂಪು ಚಟುವಟಿಕೆಯನ್ನು ಮಾಡುವುದರ ಮೂಲಕ ಕಾವೇರಿ ಶಾಲೆಯ ವಿದ್ಯಾರ್ಥಿಗಳು ತಾವು ಕಲಿತುಕೊಂಡಂತಹ ಮೋಟರ್ ಕಾರ್ ತಯಾರಿಸುವ ಹಾಗೂ ಅದನ್ನು ಚಲಾಯಿಸುವ ವಿಧಾನವನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾಗಿ ತಿಳಿಸಿ ಕೊಟ್ಟರು.
ಈ ಸಂದರ್ಭ ವಿರಾಜಪೇಟೆಯ ಕ್ಲಸ್ಟರ್ ಸಿ ಆರ್ ಪಿ ವೆಂಕಟೇಶ್, ಕಾವೇರಿ ಶಾಲೆಯ ಅಧ್ಯಕ್ಷ ಬಿ.ಎಸ್. ಸುದೇಶ್, ಕಾರ್ಯದರ್ಶಿ ಪಿ.ಎನ್.ವಿನೋದ್ ಸಹ ಶಿಕ್ಷಕಿಯರಾದ ಮೋನಿಕಾ ಹಾಗೂ ವೀಣಾ ಹಾಜರಿದ್ದರು.
ಸಹ ಶಿಕ್ಷಕಿ ಪ್ರತೀಕ್ಷ ವಂದಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*