
ಮಡಿಕೇರಿ ಮೇ 11 NEWS DESK : ಮಡಿಕೇರಿ ನಗರ ಠಾಣೆ ವೃತ್ತ ನಿರೀಕ್ಷರಾಗಿದ್ದ ಟಿ.ಕೆ.ರಾಜು ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಕೊಡಗು ಬ್ಲಡ್ ಡೋನರ್ಸ್ ಪದಾಧಿಕಾರಿಗಳು ಟಿ.ಕೆ.ರಾಜು ಅವರನ್ನು ಭೇಟಿಯಾಗಿ ತುರ್ತು ಸಂದರ್ಭದಲ್ಲಿ ರಕ್ತದ ಬೇಡಿಕೆ ಇದ್ದಾಗ ತಮ್ಮ ಇಲಾಖಾ ಸಿಬ್ಬಂದಿಗಳನ್ನು ರಕ್ತದಾನ ಮಾಡಲು ಕಳುಹಿಸುತ್ತಿದ್ದನ್ನು ಸ್ಮರಿಸಿ, ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.









