ಚೆಯ್ಯಂಡಾಣೆ ಜ.23 NEWS DESK : ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ 15ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ಗಳ ಹೊನಲು ಬೆಳಕಿನ ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಝೆಡ್ ವೈ ಸಿ ಕೊಟ್ಟಮುಡಿ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಮೈಸೂರು ಯೂನಿವರ್ಸಿಟಿ ಆಟಗಾರ ಕೊಟ್ಟಮುಡಿ ತಂಡದ ಸುಹೈಲ್ ನ ಬಿರುಸಿನ ಹೊಡೆತಕ್ಕೆ ತತ್ತರಿಸಿದ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ 25-18 ಮತ್ತು 25-15 ಅಂಕಗಳಿಂದ ಮಣಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಗುಂಡಿಕೆರೆ ತಂಡ ನಾಪೋಕ್ಲು ‘ಎ’ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ನಲ್ಲಿ ಝೆಡ್ ವೈ.ಸಿ ಕೊಟ್ಟಮುಡಿ ತಂಡ ಕರಿಕೆ ತಂಡವನ್ನು ಸೋಲಿಸಿ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡರು.
ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಕೊಟ್ಟಮುಡಿ ತಂಡದ ಸುಹೈಲ್ ಉತ್ತಮ ಅಲ್ ರೌಂಡರ್ ಪ್ರಶಸ್ತಿ ಪಡೆದು ಕೊಂಡರೆ, ಬೆಸ್ಟ್ ಡಿಪೆನ್ಸ್ ಪ್ರಶಸ್ತಿಯನ್ನು ಅದೇ ತಂಡದ ಇರ್ಷಾದ್, ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ಬಾಸಿತ್, ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಬದ್ರುದ್ದಿನ್, ಬೆಸ್ಟ್ ಪಾಸರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಗಫೂರ್ ಪಡೆದುಕೊಂಡರು.
3 ಮತ್ತು 4 ಸ್ಥಾನಕ್ಕೆ ನಡೆದ ಪಂದ್ಯಾವಳಿಯಲ್ಲಿ ಕರಿಕೆ ತಂಡ ನಾಪೋಕ್ಲು ತಂಡವನ್ನು ಸೋಲಿಸಿ 3ನೇ ಸ್ಥಾನ ಪಡೆದು ಕೊಂಡರೆ, ನಾಪೋಕ್ಲು 4 ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ತೀರ್ಪುಗಾರರಾಗಿ ರಾಷ್ಟ್ರೀಯ ಮಟ್ಟದ ನುರಿತ ತೀರ್ಪುಗರಾದ ಸುನಿಲ್ ಕುಮಾರ್, ವಿಜೇಶ್, ಅಕಿಲ್, ಸುಜಿಲ್, ನಿಜಿಲ್ ಕಾರ್ಯನಿರ್ವಹಿಸಿದರು.
ವೀಕ್ಷಕ ವಿವರಣೆಯನ್ನು ಆಸೀಫ್ ಅಮ್ಮತ್ತಿ, ರಾಶೀದ್ ಕಡಂಗ, ನಾಸರ್ ಕರಿಕೆ, ಸುಹೈಲ್ ಗುಂಡಿಗೆರೆ ನಿರ್ವಹಿಸಿದರು.
ಸಮಾರೋಪ ಸಮಾರಂಭ :: ಕೊಡಗು ಜಿಲ್ಲೆ ಕ್ರೀಡೆಗೆ ಪ್ರಸಿದ್ಧವಾದ ಜಿಲ್ಲೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ವಿರಾಜಪೇಟೆಯಲ್ಲಿ ಆಯೋಜಿಸಿದ ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬೇಕು, ಇಂತಹ ಕ್ರೀಡಾಕೂಟದಿಂದ ನಮ್ಮ ದೇಶದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲತೀಫ್ ಸುಂಟಿಕೊಪ್ಪ, ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಅಸೋಸಿಯೇಷನ್ ನ ಕೋಶಾಧಿಕಾರಿ ಹಾಗೂ ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹಂಸ ಕೊಟ್ಟಮುಡಿ, ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಹಮಾನ್ ಪಂದ್ಯಾವಳಿಗೆ ಶುಭ ಹಾರೈಸಿದರು.
ಕೊಡಗು ಮುಸ್ಲಿಂ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಎ.ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಕಳೆದ 14 ವರ್ಷದಿಂದ ಆಯೋಜಿಸಿ ಕೊಂಡು ಬರುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ವಾಲಿಬಾಲ್ ಪಂದ್ಯಾವಳಿಗೆ ಸರಕಾರದಿಂದ ಅನುದಾನ ಅಗತ್ಯವಿದೆ ಎಂದು ಹೇಳಿದರು.
ಸನ್ಮಾನ :: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದಮೈಸೂರಿನಲ್ಲಿ ನಡೆದ ವಿಶೇಷ ಚೇತನರ 65 ಕೆ.ಜಿ ವಿಭಾಗದ ಪಂಚ ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಅರೆಕಾಡು ಗ್ರಾಮದ ಹಸನ್ ಹಾಗೂ 25 ವರ್ಷದಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಗೌರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಕೀ0, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ, ಮತಿನ್, ದೇಚ್ಚಮ್ಮ, ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸಯ್ಯದ್ ಬಾವ, ಕೆ.ಡಿ.ಎಂ.ಎಸ್.ಸಿ.ಎ. ಸ್ಥಾಪಕ ಅಧ್ಯಕ್ಷ ಅಬ್ದುಲ್ ರಹ್ಮನ್ ಕೊಟ್ಟಮುಡಿ, ದಾನಿ ಲತೀಫ್ ಬೆತ್ರಿ, ನವೀನ್ ಪೊನ್ನ0ಪೇಟೆ, ಅತಿಫ್ ಮನ್ನಾ, ವಿರಾಜಪೇಟೆ ಉಪ ಠಾಣಾಧಿಕಾರಿ ಗಣಪತಿ, ರಫೀಕ್ ಕೊಲುಮಂಡ, ನಾಸರ್ ಪಾಲಿಬೆಟ್ಟ, ಮೈಸಿ ಕತ್ತಣಿರ, ಮನ್ಸೂರ್ ಅಲಿ,ಅಲೀರಾ ರಶೀದ್, ಹಂಸ ಅಮ್ಮತ್ತಿ, ಜಾಬಿರ್ ನಿಜಾಮಿ, ಜೋಕಿಂಬ್ ರಾಡಿಗ್ಸನ್, ಜಲೀಲ್,, ಕರೀಂ ಕಡಂಗ, ಹಂಸು ಎಡಪಾಲ, ಕೊಡಗು ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಮತಿತ್ತರರು ಉಪಸ್ಥಿತರಿದ್ದರು.
ಕೆ.ಡಿ. ಎಂ.ಎಸ್.ಸಿ.ಎ. ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಸ್ವಾಗತಿಸಿ ಅಬ್ದುಲ್ ರಹ್ಮನ್ (ಅಂದಾಯಿ)ಕಾರ್ಯಕ್ರಮ ನಿರೂಪಿಸಿದರು.
ವರದಿ : ಅಶ್ರಫ್