ಚೆಟ್ಟಳ್ಳಿ ಜ.25 NEWS DESK : ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ಸಹಕಾರಭವನದಲ್ಲಿ ಹೋಮ, ಹವನ ಭಜನೆ ಹಾಗೂ ಪಾದುಕಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕರಸೇವಕರಾದ ಬೊಪ್ಪಟ್ಟೀರ ಅಪ್ಪುಟ ನಾಣಯ್ಯ ಹಾಗೂ ಹೊಸಮನೆ ರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಬಲ್ಲಾರಂಡ ಮಣಿಉತ್ತಪ್ಪ, ಹಲವು ವರ್ಷ ಗಳ ರಾಮಮಂದಿರ ನಿರ್ಮಾಣ ಕನಸು ಇಂದು ನನಸಾಗಿ ಎಂದು ಹರ್ಷ ವ್ಯಕ್ತಪಡಿಸಿದರು.
ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಇಂದಿನ ದಿನ ಹಿಂದೂಗಳಿಗೆ ಮರೆಯಲಾಗದ ಪವಿತ್ರದಿನವೆಂದರು.
ಅಯೋಧ್ಯೆಯ ಪ್ರತಿಷ್ಠಾನಾ ಪೂಜಾ ನೇರಪ್ರಸಾರ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ಸಂಜೆ ಮಹಿಳೆಯರಿಂದ ದೀಪಾರಾಧನೆ ನೆರವೇರಿತು.
ವಿವಿಧ ಸಂಘಟನೆ ಯ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.









