Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಸೋಮವಾರಪೇಟೆ : ಜ.26 ರಿಂದ ರಿಪಬ್ಲಿಕ್ ಕಪ್ ಮುಕ್ತ ವಾಲಿಬಾಲ್ ಪಂದ್ಯಾವಳಿ ಆರಂಭ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ : ಜ.26 ರಿಂದ ರಿಪಬ್ಲಿಕ್ ಕಪ್ ಮುಕ್ತ ವಾಲಿಬಾಲ್ ಪಂದ್ಯಾವಳಿ ಆರಂಭ

ಜನವರಿ 25, 20241 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸೋಮವಾರಪೇಟೆ ಜ.25 : 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೆಂಚಮ್ಮನ ಬಾಣೆ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಜ.26 ಮತ್ತು 27ರಂದು ರಿಪಬ್ಲಿಕ್ ಕಪ್ ಮುಕ್ತ ವಾಲಿಬಾಲ್ ಪಂದ್ಯಾವಳಿ ಹಾಗೂ ಗ್ರಾಮಸ್ಥರಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ಕೆಂಚಮ್ಮನ ಬಾಣೆ ಭಾರತ್ ಮಾತಾ ಸೇವಾ ಸಂಘದ ಆಶ್ರಯದಲ್ಲಿ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಜ.26 ಮತ್ತು 27ರಂದು ಕೆಂಚಮ್ಮನ ಬಾಣೆಯ ಭಾರತ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುನಿಲ್ ಹೇಳಿದರು.

ಜ.26ರಂದು ವಲಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಪ್ರಥಮ ಬಹುಮಾನ 3ಸಾವಿರ ರೂ., ದ್ವಿತೀಯ ಬಹುಮಾನ 2ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ.

27 ರಂದು ಮುಕ್ತವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು ಪ್ರಥಮ 14,444ರೂ, ದ್ವಿತೀಯ 7,777 ರೂ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ.
ಕುಸುಬೂರು, ಕೆಂಚಮ್ಮನಬಾಣೆಯ ಗ್ರಾಮಸ್ಥರಿಗೂ ವಿವಿಧ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪುರುಷರಿಗೆ ಗುಡ್ಡಗಾಡು ಓಟ, ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, 100ಮಿ.ಓಟ, ನಿಂಬೆಹಣ್ಣು ಚಮಚ ಓಟ, ವಿಷದ ಚೆಂಡು, ಮ್ಯೂಜಿಕಲ್ ಚೇರ್, ಹಗ್ಗಜಗ್ಗಾಟ ನಡೆಯಲಿದೆ. ಮಕ್ಕಳಿಗೂ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.
26 ರ ಬೆಳಿಗ್ಗೆ ಕ್ರೀಡಾಕೂಟವನ್ನು ಕಾಫಿ ಬೆಳೆಗಾರರಾದ ಗುರುಮಲ್ಲೇಶ್ ಉದ್ಘಾಟಿಸಲಿದ್ದಾರೆ. 27ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಡಾ.ಮಂತರ್‍ಗೌಡ, ಸಂಸದ ಪ್ರತಾಪ್‍ಸಿಂಹ, ಮಾಜಿ ಸಚಿವ ಅಪ್ಪಚ್ಚು ರಂಜನ್ ಮತ್ತಿತರ ದಾನಿಗಳು ಉಪಸ್ಥಿತರಿರುವರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ನಡೆಯಲಿದೆ. ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9900275510, 9380295528 ಸಂಪರ್ಕಿಸಲು ಕೋರಿದೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಜಿ.ವಿಜಯ ಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್.ಆದಂ, ಪದಾಧಿಕಾರಿಗಳಾದ ಕೆ.ಎಸ್.ಪ್ರತಾಪ್, ಬಿ.ಎನ್.ಬಸವರಾಜ್ ಇದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಅ.19 NEWS DESK : ಇಲ್ಲಿನ ನಂ. 371ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತದ ವತಿಯಿಂದ ಮಹಿಳಾ…

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026

ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ

ಅಕ್ಟೋಬರ್ 19, 2026

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ದಿನಾಚರಣೆಯು ವೇದಿಕೆ

ಅಕ್ಟೋಬರ್ 19, 2026

ಮಡಿಕೇರಿಯಲ್ಲಿ ಸಂಭ್ರಮದ 9ನೇ ವರ್ಷದ ಮಹಿಳಾ ದಸರಾ; ಮಹಿಳೆಯರ ಸಾಧನೆಗೆ ಶಿಕ್ಷಣ ಅತ್ಯವಶ್ಯ: ವಿಜಯಲಕ್ಷ್ಮಿ ಸಿಂಗ್

ಅಕ್ಟೋಬರ್ 19, 2026

ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ : ದೇವಟ್ ಪರಂಬ್ ನಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಿಎನ್‌ಸಿ ಸ್ಮರಣೆ

ಅಕ್ಟೋಬರ್ 19, 2026

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಪೀಟು ಕಾರ್ಯಪ್ಪ ಅವರನ್ನು ಅಭಿನಂದಿಸಿದ ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್

ಅಕ್ಟೋಬರ್ 19, 2026

ದಸರಾ ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ದುರ್ಗಾಪೂಜೆ

ಅಕ್ಟೋಬರ್ 19, 2026

ಕೊಡಗಿನಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗೆ ಮೊಬೈಲ್ ಕ್ಯಾಂಟೀನ್ ವಾಹನ ಹಸ್ತಾಂತರ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.