ಮಡಿಕೇರಿ ಜ.25 NEWS DESK : ಮರ್ಕಝುಲ್ ಹಿದಾಯ ಸಂಸ್ಥೆಯಿಂದ ಕೊಟ್ಟಮುಡಿಯಲ್ಲಿ ನಿರ್ಮಿಸಲಾಗಿರುವ 6 ಕೋಟಿ ರೂ. ವೆಚ್ಚದ ‘ಮರ್ಕಝ್ ಹಿದಾಯ ಹಲೀಮ ಅಲ್‍ಕಿಂದಿ’ ಪ್ರಥಮ ದರ್ಜೆ ಕಾಲೇಜು ಕಟ್ಟಡ ಹಾಗೂ ಹೆಣ್ಣು ಮಕ್ಕಳ ವಸತಿಗೃಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಸಚಿವರಾದ ಭೋಸರಾಜು, ಎಚ್.ಸಿ.ಮಹದೇವಪ್ಪ, ಜಿ.ಪರಮೇಶ್ವರ್, ಕೆ.ವೆಂಕಟೇಶ್, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹರೂಜ್ ಖಾನ್, ಆಧ್ಯಾತ್ಮಿಕ ನಾಯಕರು, ಗ್ರಾಂಡ್ ಮುಫ್ತಿಗಳೂ ಆದ ಶೇಕ್ ಅಬೂಬಕರ್ ಅಹಮದ್, ಸಂಸ್ಥೆಯ ಉಪಾಧ್ಯಕ್ಷ ಮೊಹಿದ್ದೀನ್ ಕುಟ್ಟಿ ಹಾಜಿ ಕೊಳಕೇರಿ, ಖಜಾಂಚಿ ಕೆ.ಎ. ಅಬ್ದುಲ್ಲ ಕೊಟ್ಟಮುಡಿ, ಕಾರ್ಯದರ್ಶಿ ಪಿ.ಎ.ಯೂಸುಫ್ ಹಾಜಿ ಕೊಂಡಂಗೇರಿ, ಆಡಳಿತ ಅಧಿಕಾರಿ ಎಂ.ಬಿ. ಹಮೀದ್ ಕಬಡಗೇರಿ ಮೊದಲಾದವರಿದ್ದರು.








