ಕಡಂಗ ಜ.30 NEWS DESK : ಕಡಂಗ ವಿಜಯ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.
ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅತಿಥಿ ಗಣ್ಯರು ಉದ್ಘಾಟಿಸಿ, ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಲ್ಲ್ಯಾ0ಡ ಪಿ.ಬಿದ್ದಪ್ಪ, ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಂದಿನ ವರ್ಷ ಶಾಲೆ ಮುಚ್ಚುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗಿ ಹಾಜರಾಗಬೇಕು ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಕರೆ ನೀಡಿದರು.
ನರಿಯ0ದಡ ಗ್ರಾ.ಪಂ ಅಧ್ಯಕ್ಷರಾದ ಕೌಶಿ ಕಾವೇರಮ್ಮ ಮಾತನಾಡಿ, ಕನ್ನಡ ಶಾಲೆಗಳಿಂದ ಕಲಿತಿರುವ ಪ್ರತಿಭಾವಂತ ವಿದ್ಯಾವಂತರು ಇಂದಿನ ಸಮಾಜದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಿಂದ ಕಲಿಯಲು ಎಲ್ಲರೂ ಪ್ರೇರಿತರಾಗಿ ಎಂದುರು.
ನರಿಯ0ದಡ ಗ್ರಾ.ಪಂ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ ಸಂಸ್ಥೆಗೆ ಉನ್ನತ ಹೆಸರು ತರಬೇಕು ಹಾಗೂ ಜೀವನ ಪ್ರಮುಖ ಹಂತಗಳಲ್ಲಿ ವಿಜಯಶಾಲಿಗಳಾಗಬೇಕು ಎಂದು ನುಡಿದರು.
ನರಿಯಂದಡ ಗ್ರಾ.ಪಂ ಸದಸ್ಯರಾದ ಸಿ.ಇ.ಸುಬೀರ್ ಮಾತನಾಡಿ, ಸಂಸ್ಥೆಯ ಹಿರಿಯರ ಪರಿಶ್ರಮದಿಂದ ಈ ಒಂದು ಸುಸಜ್ಜಿತ ವಿದ್ಯಾ ಸಂಸ್ಥೆ ನಿರ್ಮಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಗ್ರಾ.ಪಂ ಸದಸ್ಯ ಸುಗುಣ ಕಾರ್ಯಕ್ರಮಕ್ಕೆ ಶುಭ ಕೋರಿದರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥೆಯ ಪ್ರಾರಂಭಿಕ ಹಂತದಿಂದ ಇದುವರೆಗಿನ ಸಂಕ್ಷಿಪ್ತ ವರದಿಯನ್ನು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಸೋಮಶೇಖರ್ ಸಂಕ್ಷಿಪ್ತವಾಗಿ ವಿವರಿಸಲಾಯಿತು.
ಸಂಸ್ಥೆಯ ಕ್ರೀಡಾ ವರದಿಯನ್ನು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗೀತಾ ಭೋಜಮ್ಮ ಬೋಧಿಸಿದರು. ವಾರ್ಷಿಕೋತ್ಸವದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಪ್ರಾರ್ಥಮಿಕ ವಿಭಾಗದಲ್ಲಿರುವ 222 ವಿದ್ಯಾರ್ಥಿಗಳು ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೋದಂಡ ಪಿ.ಸುಬ್ಬಯ್ಯ, ಮುಕ್ಕಾಟಿರ ಸಿ.ಬೊಪ್ಪಯ್ಯ, ಸಂಸ್ಥೆಯ ನಿರ್ದೇಶಕ ಬಲ್ಲಚಂಡ ಗೌತಮ್ , ಕಾಕೋಟು ಪರ0ಬು ಗ್ರಾ.ಪಂ ಅಧ್ಯಕ್ಷೆ ಬಟ್ಟೆಕಾಳ0ಡ ಕಾಮಿ ಸುರೇಶ್, ಕಾಂಗಿರಾ ಎಸ್.ರವಿಮಾಚಯ್ಯ, ಕೊಡಿರ ಪೊನ್ನು ಮಂದಣ್ಣ , ಚೋಳಂಡ ತಾರಾ ಬೆಳ್ಳಿಯಪ್ಪ, ಪತ್ರಕರ್ತ ನೌಫಲ್ ಮತ್ತು ಶಾಲೆಯ ಶಿಕ್ಷಕರು, ಪೋಷಕರು ಹಾಜರಿದ್ದರು.
ವರದಿ : ನೌಫಲ್ ಎಂಬಿ ಕಡಂಗ









