ವೈನಾಡ್ ಫೆ.1 NEWS DESK: ರಸ್ತೆಯಲ್ಲಿ ನಿಂತಿದ್ದ ಪ್ರವಾಸಿಗರನ್ನು ಒಂಟಿ ಸಲಗವೊಂದು ಅಟ್ಟಾಡಿಸಿದ ವಿಡಿಯೋ ಭಾರೀ ವೈರಲ್ ಆಗಿದೆ. ಕೇರಳದ ವೈನಾಡಿನ ಸುಲ್ತಾನ್ ಬತ್ತೇರಿ ಭಾಗದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ತಮ್ಮ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರು ರಸ್ತೆಗಿಳಿದು ಅರಣ್ಯ ಭಾಗವನ್ನು ವೀಕ್ಷಿಸತ್ತಿದ್ದ ಸಂದರ್ಭ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದೆ. ಇಬ್ಬರು ಪ್ರವಾಸಿಗರನ್ನು ರಸ್ತೆಯುದ್ದಕ್ಕೂ ಓಡಿಸಿದ ಕಾಡಾನೆ ಕೆಳಗೆ ಬಿದ್ದ ಒಬ್ಬರನ್ನು ತುಳಿಯಲು ಯತ್ನಿಸಿದೆ. ಆದರೆ ಅದೃಷ್ಟವಶಾತ್ ಪ್ರವಾಸಿಗ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮತ್ತೊಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಘಟನೆಯ ದೃಶ್ಯ ವೈರಲ್ ಆಗುತ್ತಿದ್ದಂತೆ ಅರಣ್ಯ ಭಾಗದ ರಸ್ತೆಗಳಲ್ಲಿ ಪ್ರವಾಸಿಗರು ಅತ್ಯಂತ ಆತಂಕದಿಂದಲೇ ತೆರಳುವಂತ್ತಾಗಿದೆ. ಅಲ್ಲದೆ ವನ್ಯಜೀವಿಗಳು ಇರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಿಯಬೇಡಿ ಎನ್ನುವ ಸಂದೇಶ ರವಾನೆಯಾಗಿದೆ.













