ಮಡಿಕೇರಿ ಫೆ.9 NEWS DESK : ಗೃಹ ಸಚಿವ ಡಾ.ಪರಮೇಶ್ವರ್, ಡಿಜಿ ಹಾಗೂ ಐಜಿಪಿ ಯವರ ಸಮ್ಮುಖದಲ್ಲಿ ಬೆಂಗಳೂರಿನ ದಾಬಸ್‌ಪೇಟೆಯಲ್ಲಿ ನಡೆದ ಮಾದಕ ದ್ರವ್ಯ ವಿನಾಶ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಡ್ರಗ್ ಡಿಸ್ಪೋಸಲ್ ಕಮಿಟಿಯಿಂದ ಒಟ್ಟು 46 ಪ್ರಕರಣಗಳಲ್ಲಿ ರೂ. 16 ಲಕ್ಷ ಮೌಲ್ಯದ 43 ಕೆ.ಜಿ ಗಾಂಜಾ, ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು. ದಕ್ಷಿಣ ವಲಯದ ಡಿಐಜಿಪಿ ಅಮಿತ್ ಸಿಂಗ್, ಹಿರಿಯ ಪೊಲೀಸ್ ಅಧಿಕಾರಿಗಳು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಎಸ್ ಪಿ ಸುಂದರರಾಜ್ ಹಾಜರಿದ್ದರು.











