ವಿರಾಜಪೇಟೆ ಫೆ.10 :NEWS DESK : ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸುಮಾರು ಐವತ್ತು ಸಾವಿರ ರೂ.ಗಳ ವಾಟರ್ ಪ್ಯೂರಿಪಯರ್‍ನ್ನು ದಾನವಾಗಿ ನೀಡಿದ ಡಾ. ಸುಧಾಕರ್ ಶೆಟ್ಟಿ ಅವರನ್ನು ಕಾಲೇಜು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಡಿಕೇರಿ ಡೇರಿಯನ್ ಅಸೋಸಿಯೇೀಷನ್‍ನ ಅಧ್ಯಕ್ಷ ಕೆ.ಪಿ.ಉತ್ತಪ್ಪ ಅವರು, ಸಮಾಜ ಸೇವೆಯ ಮುಖಾಂತರ ದೇವರನ್ನು ಕಾಣಬಹುದು ಅಂತಹ ಸೇವೆಯನ್ನು ಎಲ್ಲರೂ ಮಾಡುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಕೆ.ಕೆ.ಶೈನಾ, ಇತಿಹಾಸ ಉಪನ್ಯಾಸಕರಾದ ಶಿವದಾಸ್, ಪಾರ್ವತಿ, ಸುನೀತಾ ಸೇರಿದಂತೆ ಎಲ್ಲಾ ಉಪನ್ಯಾಸಕರು, ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.








