ಮಡಿಕೇರಿ ಫೆ.10 NEWS DESK : ಮದವೇರಿದ ಕಾಡಾನೆಯೊಂದು ಅರಣ್ಯ ರಕ್ಷಕರನ್ನು ಬೆನ್ನಟ್ಟಿ ಬೈಕ್ ನ್ನು ಜಖಂಗೊಳಿಸಿದ ಘಟನೆ ಸೋಮವಾರಪೇಟೆಯ ಕೋವರ್ ಕೊಲ್ಲಿ ಕಾಜೂರು ಅರಣ್ಯ ಭಾಗದಲ್ಲಿ ನಡೆದಿದೆ.
ಕಾಫಿ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಸಿಬ್ಬಂದಿಗಳಾದ ಹರ್ಷಿತ್, ಶ್ರೀಕಾಂತ್, ದರ್ಶನ್, ವಿನೋದ್ ಹಾಗೂ ಶ್ರೀಕಾಂತ್ ಅವರುಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮದಗಜ ಬೈಕ್ ವೊಂದನ್ನು ತುಳಿದು ಹಾನಿಗೊಳಿಸಿದೆ. ಅಲ್ಲದೆ ಟಾಟಾ ಎಸ್ಟೇಟ್ ನ ಗೇಟ್ ನ್ನು ಮುರಿದು ಹಾಕಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರೆದಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.











