ಮಡಿಕೇರಿ ಫೆ.17 NEWS DESK : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಾಪೂಜಿ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಹುಮಾನ ಪಡೆದ ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಕೆ.ಎಸ್.ಹೃತ್ಪೂರ್ವಕ್ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಆಡಳಿತ ಮಂಡಳಿಯ ಸಂಚಾಲಕ ರೆ.ಫಾ. ನವೀನ್‍ಕುಮಾರ್, ಪ್ರಾಂಶುಪಾಲರಾದ ಕೆ.ಎಸ್. ಸುಮಂತ್, ಮುಖ್ಯೋಪಾಧ್ಯಯರಾದ ಕೆ.ಎ.ಜಾನ್ಸನ್, ಸಿಸ್ಟರ್ ಸರಿತಾ ಮಾರ್ತಾ, ಸಿಸ್ಟರ್ ಪ್ರತಿಮಾ ಇತರರು ಇದ್ದರು.









