ವಿರಾಜಪೇಟೆ ಫೆ.17 NEWS DESK : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮ ಕನ್ನಡಿಗ ಮತ್ತು ಸುವರ್ಣ ಶ್ರೀ ಕನ್ನಡ ಪ್ರಶಸ್ತಿ ಹಾಗೂ ನೃತ್ಯೋತ್ಸವದಲ್ಲಿ ಸಂತ ಅನ್ನಮ್ಮ ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿ ಸಂಚಿತ ಆಚಾರ್ಯ ವಿವಿಧ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಗಮನ ಸೆಳೆದರು.
ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರು ಪುಟ್ಟ ಬಾಲೆಯ ನೃತ್ಯಕ್ಕೆ ಮನಸೋತು ಸಂಚಿತಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ವಿರಾಜಪೇಟೆಯ ಪ್ರೇಮಾಂಜಲಿ ಆಚಾರ್ಯ ಮತ್ತು ಚಂದ್ರು ಆಚಾರ್ಯ ಅವರ ಪುತ್ರಿಯಾಗಿರುವ ಸಂಚಿತ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿನಿ.









