ಮಡಿಕೇರಿ ಫೆ.27 NEWS DESK : ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರುಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೇಮಕ ಮಾಡಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರು ತಿಳಿಸಿದ್ದಾರೆ.
ಜಿಲ್ಲಾ ಸಮಿತಿಯ ಉಪಾಧ್ಯಕ್ಷರುಗಳಾಗಿ ಡಿ.ಕೆ.ತಿಮ್ಮಪ್ಪ ಕುಶಾಲನಗರ, ಬಿ.ಎಸ್.ಚಂದ್ರಶೇಖರ್ ಹಳ್ಳಿಗಟ್ಟು, ಕೋಲೆಯಂಡ ಗಿರೀಶ್ ಕಡಂಗ, ಟಿ.ಜಿ.ಮನು ಪೊನ್ನಂಪೇಟೆ, ಪಿ.ಎನ್.ಗಂಗಾಧರ್ ಮಾಲಂಬಿ, ಕಾರ್ಯದರ್ಶಿಗಳಾಗಿ ಕೆ.ರಾಜೇಶ್ ಗೋಣಿಕೊಪ್ಪ, ಸತೀಶ್ ಕುಂದಾರ್ ಕುಶಾಲನಗರ, ಬಿ.ಎಂ.ರಾಜೇಶ್ ಮಡಿಕೇರಿ, ಕೆ.ಎಸ್.ಸರಸ್ವತಿ ಎಂ.ಬಾಡಗ, ಬಿ.ಡಿ.ಪದ್ಮನಾಭ ಸುಂಟಿಕೊಪ್ಪ ನೇಮಕಗೊಂಡಿದ್ದಾರೆ.
ಖಜಾಂಚಿಯಾಗಿ ಬಿ.ವಿ.ರೋಶನ್ ಮಡಿಕೇರಿ, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಿನಿತ್ ಕುಲಾಲ್ ನಲ್ವತ್ತೆಕ್ರೆ ಹಾಗೂ ಕಾರ್ಯಾಲಯ ಕಾರ್ಯದರ್ಶಿಯಾಗಿ ಜಿ.ಜಿ.ಬಾಲಕೃಷ್ಣ ಮಡಿಕೇರಿ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಎಂ.ಎಂ.ಲಿಜೇಶ್ ಅಮ್ಮತ್ತಿ, ಬಿ.ಟಿ.ಕೃಷ್ಣಪ್ಪ ಪೂಜಾರಿ ರ‍್ವತ್ತೋಕ್ಲು, ಕೆ.ಎಂ.ಮಣಿಕಂಠ ಪಾರಾಣೆ, ಬಿ.ಎಸ್.ಅರುಣ ಕೆದಮುಳ್ಳೂರು, ಬಿ.ಕೆ.ಪ್ರದೀಪ್ ಮರಗೋಡು, ಟಿ.ಎಸ್.ಅಕ್ಷಯ್ ಗೋಣಿಕೊಪ್ಪ, ಬೈಲುಗುಂದರ ಮನು ಮೇದಪ್ಪ ಪಾರಾಣೆ, ಬಿ.ಬಿ.ನಳಿನಿ ಮಡಿಕೇರಿ, ಉಮಾಪ್ರಭ ನಾಪೋಕ್ಲು, ಸಿ.ಕೆ.ಬಾಲಕೃಷ್ಣ ಮಡಿಕೇರಿ, ಸುದೀಶ್ ಪುಲಿಯೇರಿ ಹಾಗೂ ಸತೀಶ್ ಕುಮಾರ್ ಮಕ್ಕಂದೂರು ಅವರನ್ನು ಪಕ್ಷ ಸಂಘಟನೆಯ ದೃಷ್ಟಿಯಿಂದ ನೇಮಕ ಮಾಡಲಾಗಿದೆ ಎಂದು ಅಪ್ರು ರವೀಂದ್ರ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.











