ಸುಂಟಿಕೊಪ್ಪ, ಫೆ.29 NEWS DESK : ಲೆಪ್ಟಿನೆಂಟ್ ಜನರಲ್ ಡಾ.ಬಿಎನ್‍ಬಿಎಂ ಪ್ರಸಾದ್ ಎಸ್‍ಎಂ, ವಿಎಸ್‍ಎಂ ಅವರಿಗೆ ಡಾ.ಕೊಯಿಲೋ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಅಖಿಲ ಭಾರತೀಯ ತಜ್ಞವೈಧ್ಯರ ಸಂಘವು ನವದೆಹಲಿಯ ಭಾರತ ಮಂಡಪಂ ಸಭಾಂಗಣದಲ್ಲಿ ನಡೆಸಿದ ತನ್ನ 79ನೇ ರಾಷ್ಟ್ರೀಯ ಅಧಿವೇಶನದಲ್ಲಿ ಡಾ.ಪ್ರಸಾದ್ ಅವರಿಗೆ ಈ ಗೌರವವನ್ನು ನೀಡಿ ಸನ್ಮಾನಿಸಿದೆ.
ಇದೇ ಸಂದರ್ಭದಲ್ಲಿ ಡಾ. ಪ್ರಸಾದ್ ಅವರು ಸಮಾವೇಶದಲ್ಲಿ ಶ್ವಾಸಕೋಶದ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳ ಕುರಿತು ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅವರು, ಅಖಿಲ ಭಾರತೀಯ ತಜ್ಞವೈಧ್ಯರ ಸಂಘದ ಮಾಜಿ ಅಧ್ಯಕ್ಷ ಮತ್ತು ರಾಯಲ್ ಕಾಲೇಜ್ ಆಫ್ ಪಿಜಿಶಿಯನ್ಸ್ ಗ್ಲಾಸ್ಗೋದ ಅಂತರಾಷ್ಟ್ರೀಯ ನಿರ್ದೇಶಕ ಡಾ.ಮುರುಗನಾಥನ್ ಅವರ ಕೃತಿ ‘ಹೈಪರ್ ಟೆನ್ಷನ್ ಮ್ಯಾನುವೆಲ್” ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಕೃತಿಕಾರ ಡಾ.ಮುರುಗನಾಥನ್, ರಾಯಲ್ ಕಾಲೇಜ್ ಆಫ್ ಪಿಜಿಶಿಯನ್ಸ್ ಗ್ಲಾಸ್ಗೋದ ಉಪಾಧ್ಯಕ್ಷ ಪ್ರೋಫೆಸರ್ ಹ್ಯಾನಿ ಎಟಿಬಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಲೆಪ್ಟಿನೆಂಟ್ ಜನರಲ್ ಡಾ.ಬಿಎನ್‍ಬಿಎಂ ಪ್ರಸಾದ್ ಎಸ್‍ಎಂ, ವಿಎಸ್‍ಎಂ ಕೊಡಗಿನ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದವರಾಗಿದ್ದು, ವೈದಕೀಯ ಪದವಿ ಪಡೆದ ಬಳಿಕ 1977 ರಲ್ಲಿ ಭಾರತೀಯ ಭೂ ಸೇನೆಯನ್ನು ಸೇರಿ 2016 ರಲ್ಲಿ ಭಾರತೀಯ ರಕ್ಷಣಾ ಪಡೆಗಳ ವೈಧಕೀಯ ವಿಭಾಗದ ಮಹಾನಿರ್ದೇಶಕರಾಗಿ, ಮುಖ್ಯ ಸವiಲೋಚಕರಾಗಿ, ಭಾರತದ ರಾಷ್ಟ್ರಪತಿಗಳ ಗೌರವ ಸರ್ಜನ್‍ರಾಗಿ ನಿವೃತ್ತರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಗೌರವ ಪಧವಿಗಳಿಗೆ ಪಾತ್ರರಾಗಿದ್ದಾರೆ.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*