ಸುಂಟಿಕೊಪ್ಪ ಫೆ.29 NEWS DESK : ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹೊರಡಿಸಿರುವ ಹರಾಜು ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು, ಅದರಂತೆ ಮುಂದುವರಿಯುತ್ತೇವೆ ಎಂದು ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಹೇಳಿದ್ದಾರೆ.
ಸುಂಟಿಕೊಪ್ಪ ಗ್ರಾ.ಪಂ ಸರ್ವ ಸದಸ್ಯರ ಸಭೆಯು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಹಾಗೂ ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಪಿ.ಆರ್.ಸುನಿಲ್ ಕುಮಾರ್ ಪಂಚಾಯಿತಿಯಲ್ಲಿನ ಕೆಲವು ಸದಸ್ಯರ ಗೊಂದಲ ಮತ್ತು ಅನಾವಶ್ಯಕವಾದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕುವ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಕಾನೂನು ಬದ್ಧವಾಗಿ ಮುಂದುವರೆಸಲು ತೀರ್ಮಾನಿಸಲಾಯಿತು. ಹಳೆಬರು ಮತ್ತು ಹೊಸಬರು ಎಂಬುದು ಹರಾಜು ಪ್ರಕ್ರಿಯೆಯಲ್ಲಿ ಇಲ್ಲ ಬದಲಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಗೆ ಸಮಾನ ಅವಕಾಶ ಮತ್ತು ಹಕ್ಕುಗಳು ಇರುತ್ತವೆ ಎಂದು ಸುನಿಲ್ ಕುಮಾರ್ ಸ್ಪಷ್ಟವಾಗಿ ನುಡಿದರು.
ಪಂಚಾಯಿತಿ ಸದಸ್ಯ ರಫೀಕ್ ಖಾನ್ ಮಾತನಾಡಿ, ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮ ಮೂಗಿನ ನೇರಕ್ಕೆ ಟೆಂಡರ್ ಪ್ರಕ್ರಿಯೇಯನ್ನು ಮಾಡಿದ್ದು, ಇಲ್ಲಿ ಪಂಚಾಯಿತಿಗೆ ನೇರವಾಗಿ ಹಣ ಪಾವತಿಸುವವರು ಬೇಕಾಗಿಲ.್ಲ ಸಾಕಷ್ಟು ಚೆರ್ಚೆಯ ಬಳಿಕ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು ಈಗಾಗಲೇ ಹರಾಜು ಪ್ರಕ್ರಿಯೆಯನ್ನು ಕಾನೂನು ಬದ್ಧವಾಗಿ ಮಾಡಿದ್ದು, ಅದರಂತೆ ಮುಂದುವರಿಯಲಾಗುವುದೆಂದು ಪ್ರಕಟಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮೀನು, ಕೋಳಿ ಮತ್ತು ಕುರಿ ಮಾಂಸ ಮಳಿಗೆಗಳ ತೆರವು ಪ್ರಕ್ರಿಯೆಯು ರಾಜ್ಯ ಉಚ್ಛನ್ಯಾಯಾಲಯದ ಮುಂದೆ ಇದು,್ದ ಈ ಬಗ್ಗೆ ಏನ್ನನು ಹೇಳ ಬಯಸುವುದಿಲ್ಲ ಆದರೆ ನ್ಯಾಯಾಲಯದ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಈಗಾಗಲೇ ವರದಿಯಾಗಿರುವಂತೆ ಸುಂಟಿಕೊಪ್ಪ ಗ್ರಾ.ಪಂ ವತಿಯಿಂದ ಸರ್ವ ಸದಸ್ಯರ ಸಭೆ ಕರೆದು ಕೋಳಿ, ಕುರಿ, ಮೀನು, ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಒಪ್ಪಿಗೆ ಪಡೆದು ಸಾರ್ವಜನಿಕ ಜಾಹೀರಾತು ಮೂಲಕ ಟೆಂಡರ್ ಪ್ರಕ್ರಿಯೇ 15 ದಿನಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಅದರಂತೆ ಫೆ.27 ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬೆಳಗ್ಗಿನಿಂದ ಟೆಂಡರ್ ಪ್ರಕ್ರಿಯೇಯಲ್ಲಿ ಪಾಲ್ಗೊಳ್ಳಲು ನಿಗಧಿತ ಶುಲ್ಕವನ್ನು ನಿಗಧಿತ ನಮೂನೆಯಲ್ಲಿ ಬ್ಯಾಂಕಿಗೆ ಪಾವತಿ ಮಾಡಲು ಹಾಲಿ ಅಂಗಡಿ ಹೊಂದಿರುವ ಕೆಲವು ವ್ಯಾಪಾರಸ್ಥರು ವಿಫಲರಾಗಿದ್ದಾರೆ. ಇದೇ ಹೊತ್ತಿಗೆ ಹಾಲಿ ವ್ಯಾಪಾರಸ್ಥರ ಪೈಕಿ ಕೆಲವರು ಮತ್ತು ಹೊಸಬರು ನಿಗಧಿತ ಶುಲ್ಕಕಟ್ಟಿ ಟೆಂಡರ್ ಪ್ರಕಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ ಇದು ಕೆಲವು ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮತ್ತು ನಾಲ್ವರು ಸಹಾಯಕ ಸಬ್‍ಇನ್ಸ್‍ಪೇಕ್ಟರ್ ಸಹಿತವಾದ ಪೊಲೀಸ್ ತಂಡ ಸಭೆಗೆ ಬಂದೋಬಸ್ತ್ ಒದಗಿಸಿತ್ತು.