ಸಿದ್ದಾಪುರ ಫೆ.29 NEWS DESK : ಅಮ್ಮತಿ ಸಮೀಪದ ಪುಲಿಯೇರಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದ ವಾರ್ಷಿಕ ಮಹೋತ್ಸವವು ಮಾ.7 ರಿಂದ 11ರ ವರಗೆ ನಡೆಯಲಿದೆ.
ಮಾ.7 ರಂದು ಸಂಜೆ 5ಘಂಟೆಯಿಂದ ಅಚಾರ್ಯವರಣಂ, ದೀಪಾರಾಧನೆ, ಅನ್ನ ಸಂತರ್ಪಣೆ ಪೂಜೆ ನಡೆಯಲಿದೆ.
ಮಾ.8 ರಂದು ಬೆಳಿಗ್ಗೆಯಿಂದ ಗಣಪತಿ ಹೋಮ, ಉಷಾ ಪೂಜೆ, ಕಳಸ ಪೂಜೆ, ಮಹಾಪೂಜೆ ಸಂಜೆ ದೀಪಾರಾಧನೆ, ಸರ್ವ ಐಶ್ವರ್ಯ ಪೂಜೆ, ಅತ್ತಾಯ ಪೂಜೆ ರಾತ್ರಿ ಹತ್ತು ಗಂಟೆಯಿಂದ ಶಿವರಾತ್ರಿ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಜನೆ ಕಾರ್ಯಕ್ರಮ ನಡೆಯಲಿದೆ
ಮಾ.9 ಮತ್ತು 10ರಂದು ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ.
11 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ, ಮಹಾ ಪೊಂಗಲ, ಮಹಾಪೂಜೆ, ಮಹಾ ಕುರದಿ, ಸಂಜೆ ಮೂರು ಗಂಟೆಗೆ ಚೆಂಡೆ ವಾದ್ಯಗಳೊಂದಿಗೆ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ, ಮಂಗುಯಿಯಿಲ್ ಶ್ರೀ ಭಗವತಿ ಕ್ಷೇತ್ರದಿಂದ ಗುಹ್ಯ ಅಗಸ್ತೇಶ್ವರ ದೇವಾಲಯದ ಸಮೀಪದ ಕಾವೇರಿ ನದಿಯವರೆಗೆ ಮೆರವಣಿಗೆ ನಂತರ 5 ಗಂಟೆಗೆ (ದೇವಿ ಆರಾಟ್) ಪುಣ್ಯನದಿ ಕಾವೇರಿಯಲ್ಲಿ ದೇವಿಯ ಸ್ನಾನದ (ಆರಾಟ್) ಬಳಿಕ ವಾದ್ಯಗಳೊಂದಿಗೆ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಹಿಂತಿರುಗಲಿದೆ .
ಐದು ದಿನಗಳ ಕಾಲ ಭಕ್ತರಿಗೆ ಬೆಳಗ್ಗೆ ಮಧ್ಯಾಹ್ನ ರಾತ್ರಿ ಅನ್ನದಾನ ನಡೆಯಲಿದೆ.
ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಲಿದ್ದು, ಭಕ್ತರ ಅನುಕೂಲಕ್ಕಾಗಿ ಅಗತ್ಯ ಸಿದ್ಧತೆ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿಯ ಪ್ರಮುಖರಾದ ಎಂ.ಟಿ.ಶಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.