ಮಡಿಕೇರಿ ಮಾ.1 : ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ನಗರ ಮಂಡಲಕ್ಕೆ ಪಕ್ಷದ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರ ಅನುಮೋದನೆಯೊಂದಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರುಗಳಾಗಿ ಬಿ.ಎಸ್.ಪ್ರಶಾಂತ್, ತಾತಪಂಡ ಉತ್ತಪ್ಪ (ನಂದ), ರಜೀ, ಬಿ.ಪಿ.ಡಿಶು, ಪಿ.ಕಲಾವತಿ, ಜಿ.ಆರ್.ಸುದರ್ಶನ್(ಗಣೇಶ್), ಕಾರ್ಯದರ್ಶಿಗಳಾಗಿ ಪ್ರೇಮ ರಾಘವಯ್ಯ, ಸಿ.ಕೆ.ಪ್ರಭಾಕರ್, ಬಿ.ಎಂ.ಹರೀಶ್, ಲಕ್ಷ್ಮಿ ಕುಟ್ಟಪ್ಪ, ಕೀರ್ತಿ ರಾಜು, ವೈಭವಿ ಸಂದೀಪ್ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಉಮೇಶ್ ಸುಬ್ರಮಣಿ ತಿಳಿಸಿದ್ದಾರೆ.
ಖಜಾಂಚಿಯಾಗಿ ಜಯಂತ್ ಪೂಜಾರಿ, ಕಾರ್ಯಾಲಯ ಕಾರ್ಯದರ್ಶಿಯಾಗಿ ಟಿ.ಆರ್.ಜೀವನ್, ಯುವ ಮೋರ್ಚಾದ ಅಧ್ಯಕ್ಷರಾಗಿ ಪಾಂಡೀರ ಪೂಣಚ್ಚ, ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಸೌಮ್ಯ ಸುನೀಲ್, ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಗಜೇಂದ್ರ (ಕುಶ), ಎಸ್.ಸಿ.ಮೋರ್ಚಾದ ಅಧ್ಯಕ್ಷರಾಗಿ ಹೆಚ್.ಜಿ.ಮುಕುಂದ, ರೈತ ಮೋರ್ಚಾದ ಅಧ್ಯಕ್ಷರಾಗಿ ಎಂ.ನಯನ್ ಕುಮಾರ್ ಹಾಗೂ ಎಸ್.ಟಿ.ಮೋರ್ಚಾದ ಅಧ್ಯಕ್ಷರಾಗಿ ಕೆ.ಎ.ಕುಡಿಯರ ಸೋಮಯ್ಯ ನೇಮಕಗೊಂಡಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.










