ಸೋಮವಾರಪೇಟೆ ಮಾ.2 NEWS DESK : ಚಿಕ್ಕಮಗಳೂರು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಚಿಕ್ಕಮಗಳೂರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಹಿರಿಯರ ರಾಜ್ಯಮಟ್ಟದ ಮ್ಯಾರಥಾನ್‍ನಲ್ಲಿ ಶಾಂತಳ್ಳಿಯ ಗಿರಿಜಾ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
50 ರಿಂದ 60 ವರ್ಷ ವಯೋಮಾನದ ರಾಜ್ಯಮಟ್ಟದ ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದ ಗಿರಿಜಾ ಅವರು ದ್ವಿತೀಯ ಸ್ಥಾನಗಳಿಸುವ ಮೂಲಕ ನಗದು ಬಹುಮಾನದೊಂದಿಗೆ ಪಾರಿತೋಷಕಕ್ಕೆ ಭಾಜನರಾಗಿದ್ದಾರೆ.
ಅಸೋಸಿಯೇಷನ್‍ನ ಅಧ್ಯಕ್ಷ ಉದಯ್ ಪೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಎಚ್.ಸಿ. ಮಂಜುಳಾ, ಜಿಲ್ಲಾ ಆಯುಕ್ತೆ ಮೀನಾ ನಾಗರಾಜ್, ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.








