ಮಡಿಕೇರಿ ಮಾ.6 NEWS DESK : ಪ್ರಸಕ್ತ (2023-24) ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯಡಿ ಆಪ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಿಗಧಿತ ಅರ್ಜಿ ನಮೂನೆಗಳನ್ನು ಕಚೇರಿ ಸಮಯದಲ್ಲಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್, 25 ರೊಳಗೆ ಸಲ್ಲಿಸಬೇಕು.
ಸ್ವಯಂ ಉದ್ಯೋಗದಡಿ ಟೈಲರಿಂಗ್(60 ದಿನ), ಬೊಟಿಕ್(30 ದಿನ), ಸಹಾಯಕ ಕೂದಲು ಚಿಕಿತ್ಸಕರು(30 ದಿನ), ವಸ್ತ್ರ ವಿನ್ಯಾಸಕಾರ(30 ದಿನ), ಹಾರ್ಡ್‍ವೇರ್ ರಿಪೇರ್ ಟೆಕ್ನಿನಿಷಿಯನ್(ಯಂತ್ರಾಂಶ ದುರಸ್ತಿ ತಂತ್ರಜ್ಞ) (30 ದಿನ), ಹೇರ್ ಸ್ಟೈಲಿಸ್ಟ್(30 ದಿನ), ಸೌಂದರ್ಯ ಚಿಕಿತ್ಸಕ(30 ದಿನ), ದೇಶಿಯಾ ಡೇಟಾ ಎಂಟ್ರಿ ಆಪರೇಟರ್ (60 ದಿನಗಳು), ಸೌರ ಫಲಕ ಸ್ಥಾಪನೆ ಮತ್ತು ಸೇವೆ(30 ದಿನ) ಅರ್ಜಿಯೊಂದಿಗೆ ಪೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ-571201 ದೂ.ಸಂ.08272-228857 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.









