ಮಡಿಕೇರಿ ಮಾ.6 NEWS DESK : ಬಾಳೆಲೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಬಾಳೆಲೆ ಕೊಡವ ಸಮಾಜದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಳೆಲೆ ಗ್ರಾ.ಪಂ ಅಧ್ಯಕ್ಷರಾದ ಮುಕ್ಕಾಟಿರ ಜಾನಕಿ ಕಾವೇರಪ್ಪ, ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿದ್ದು ನೀರಿನ ಕೊರತೆಯನ್ನು ನಿಭಾಯಿಸಲು ಗ್ರಾಮ ಪಂಚಾಯಿತಿ ನಿರಂತರ ಶ್ರಮ ವಹಿಸುತಿದ್ದು, ಪಂಚಾಯಿತಿ ಆಡಳಿತದೊಂದಿಗೆ ಗ್ರಾಮಸ್ಥರು ಸಹಕರಿಸುವಂತೆ ಕರೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ಗ್ರಾಮ ಪಂಚಾಯಿತಿ ಸದಸ್ಯ ಅದೇಂಗಡ ವಿನು ಉತ್ತಪ್ಪ, ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಸದಾ ಸನ್ನದ್ಧವಾಗಿದೆ ಎಂದು ಭರವಸೆ ನೀಡಿದರು.
ಗ್ರಾ.ಪಂ ಸದಸ್ಯ ಪೊಡಮಾಡ ಸುಕೇಸ್ ಭೀಮಯ್ಯ, ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯು ಬಾಳೆಲೆ ಮತ್ತು ದೇವನೂರು ಭಾಗದಲ್ಲಿ ಪ್ರಗತಿಯಲ್ಲಿದ್ದು, ಈ ಕಾಮಗಾರಿ ಪೂರ್ಣಗೊಂಡ ನಂತರ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಕಾಣಲಿದೆಯೆಂದು ಮಾಹಿತಿ ನೀಡಿದರು. ನರೇಗಾ ಯೋಜನೆ, ಸಾರ್ವಜನಿಕ ಶೌಚಾಲಯ, ತೋಟಗಾರಿಕೆ, ಅಸ್ಪತ್ರೆ ಮತ್ತಿತರ ವಿಚಾರವಾಗಿ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಗ್ರಾ.ಪಂಉಪಾಧ್ಯಕ್ಷ ಕಳ್ಳಿಚಂಡ ರಕ್ಷಿತ್ ಕುಶಾಲಪ್ಪ, ನೋಡಲ್ ಅಧಿಕಾರಿಗಳಾದ ಪಶುವೈದ್ಯಾಧಿಕಾರಿ ಡಾ.ಭವಿಷ್ಯ ಕುಮಾರ್, ಗ್ರಾ.ಪಂ ಸದಸ್ಯರುಗಳಾದ ಅಡ್ಡೇಂಗಡ ನವೀನ್, ಕೊಕ್ಕೇಂಗಡ ಸುಮಿತಾ, ಗಂಗೆ, ಗೌರಿ, ಪುಟ್ಟಮ್ಮ, ಗ್ರೇಸಿ, ಪ್ರಮೀಳಾ, ಸಿಂಗ, ಪುಷ್ಪಾವತಿ ಚಂದ್ರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಶುಚಿತ್ವಕ್ಕೆ ಶ್ರಮಿಸಿತ್ತಾ ಉತ್ತಮ ಜನಮನ್ನಣೆಯನ್ನು ಪಡೆದಿರುವ ಪೌರಕಾರ್ಮಿಕ ಮೂರ್ತಿ ಅವರನ್ನು ಗ್ರಾ.ಪಂ ಆಡಳಿತದಿಂದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.