ಸೋಮವಾರಪೇಟೆ ಮಾ.7 NEWS DESK : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಮೂರು ದಿನಗಳ ಜಾತ್ರೋತ್ಸವಕ್ಕೆ ದೇವಿಗೆ ಜ್ಯೋತಿ ಬೆಳಗುವುದರ ಮೂಲಕ ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಳ್ಳಿ ನವೀನ್ ಚಾಲನೆ ನೀಡಿದರು.
ಪಶುವೈದ್ಯ ಇಲಾಖೆಯ ವತಿಯಿಂದ ಉಚಿತ ಪಶುಚಿಕಿತ್ಸಾ ಶಿಬಿರ, ಉತ್ತಮ ರಾಸುಗಳಿಗೆ ಬಹುಮಾನ ಹಾಗೂ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಯಿತು.
ಈ ಸಂದರ್ಭ ಗೌಡಳ್ಳಿ ಸಹಕಾರ ಸಂಘದ ಸಿಇಒ ಜಿ.ಕೆ.ಪೊನ್ನಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಇಂದೂದರ್, ಪಶುವೈದ್ಯಾಧಿಕಾರಿ ಸತೀಶ್ ಕುಮಾರ್, ದೇವಾಲಯ ಸಮಿತಿಯ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಚ್.ಆರ್.ಮುತ್ತಣ್ಣ, ಪದಾಧಿಕಾರಿಗಳಾದ ಜಿ.ಎ.ಮಹೇಶ್, ಎಚ್.ಪಿ.ಸುರೇಶ್, ವೀರಭದ್ರಪ್ಪ, ನಾಗರತ್ನ, ರಾಮಚಂದ್ರ, ಪ್ರಧಾನ ಅರ್ಚಕ ವಿಶ್ವರೂಪಚಾರ್ ಮತ್ತಿತರರು ಇದ್ದರು.









