


ಮಡಿಕೇರಿ ಮಾ.7 NEWS DESK : ವೇತನ ಪಾವತಿಗಾಗಿ ಆಗ್ರಹಿಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರ ಧರಣಿ ಏಳನೆಯ ದಿನವೂ ಮುಂದುವರೆಯಿತು.
ನೂತನ ಕುಲಪತಿಗಳಾದ ಪ್ರೊ. ಪಿ.ಎಲ್.ಧರ್ಮ ಅವರು ಧರಣಿ ನಿರತ ಉಪನ್ಯಾಸಕರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದರು. ಧರಣಿಯನ್ನು ಹಿಂತೆಗೆದುಕೊಳ್ಳಲು ಮನವಿ ಮಾಡಿದರು.
ನಂತರ ಈ ಬಗ್ಗೆ ಚರ್ಚೆ ನಡೆಸಿದ ಉಪನ್ಯಾಸಕರು ವೇತನ ಪಾವತಿ ವ್ಯವಸ್ಥೆಯಲ್ಲಿ ಹಲವು ಗೊಂದಲಗಳು ಇರುವುದರಿಂದ, ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಅಧಿಕಾರಿಗಳೊಂದಿಗೆ ಮುಖತ: ಮಾತುಕತೆ ನಡೆಸಿ ನಿರ್ಧಾರಕ್ಕೆ ಬರಲು ಸಾಧ್ಯ ಎನ್ನುವ ಕಾರಣದಿಂದ ಧರಣಿಯನ್ನು ಮುಂದುವರೆಸಿದರು.










