ವಿರಾಜಪೇಟೆ ಮಾ.7 NEWS DESK : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ನಡೆದ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಕೊಡಗಿನ ಹಾಕತ್ತೂರಿನ ಸಿನಾನ್ ತಂಡಕ್ಕೆ ಬೆಸ್ಟ್ ಪೇಪರ್ ಪ್ರೆಸೆಂಟೇಷನ್ ಪ್ರಶಸ್ತಿ ಲಭಿಸಿದೆ.
ಮೂಲತಃ ಕೊಡಗು ಜಿಲ್ಲೆಯ ಹಾಕತ್ತೂರಿನವರಾದ ಮೈಸೂರಿನ ಮಹಾರಾಜ ಇನ್ಸ್ಟಿಟ್ಯೂಟ್ ನ ಎಂ. ಬಿ.ಎ.ವಿದ್ಯಾರ್ಥಿ ಸಿನಾನ್ ಹಾಗೂ ಅದೇ ಕಾಲೇಜಿನ ಅಗಮ್ಯ ರುಬೆನ್ ಮಂಡಿಸಿದ ಎ ಸ್ಟಡಿ ಕಸ್ಟಮರ್ಸ್ ಟುವರ್ಡ್ಸ್ ಆನ್ಲೈನ್ ಶಾಪಿಂಗ್, ವಿಥ್ ಸ್ಪೆಷಲ್ ರೆಫರೆನ್ಸ್ ಟು ಅಮೆಜಾನ್ ಮೈಸೂರ್ ಸಿಟಿ ಎಂಬ ವಿಷಯಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಶರಣಪ್ಪ ವಿ.ಹಲಸೆ ಉತ್ತಮ ಸಂಶೋಧನೆ ಮಂಡನೆ ಪ್ರಶಸ್ತಿ ನೀಡಿ ಗೌರವಿಸಿದೆ.
ಸಿನಾನ್ ಹಾಕತ್ತೂರುವಿನ ಎಂ.ಎಂ.ಅಬ್ಬಾಸ್ ಹಾಗೂ ಪಿ.ಹೆಚ್. ಹಜಾರ ದಂಪತಿಗಳ ಪುತ್ರ. ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ.









