ಮಡಿಕೇರಿ ಮಾ.7 NEWS DESK : ವಿರಾಜಪೇಟೆ ವಿಧಾಸಭಾ ಕೇತ್ರದ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.
ಪೆರಾಜೆ ಗ್ರಾ.ಪಂ ಕಚೇರಿಯಲ್ಲಿ ಪಂಚಾಯತ್ ವ್ಯಾಪ್ತಿಯ ಪುತ್ಯ ಪೆರಾಜೆ ಶಾಲೆಯ ಪಕ್ಕದಿಂದ ನಿಡ್ಯಮಲೆ ಲಿಂಕ್ ರಸ್ತೆಯ ಅಭಿವೃದ್ಧಿ, ಪೆರಂಗಾಜೆ ಕುಟುಂಬಸ್ಥರ ರಸ್ತೆ ಅಭಿವೃದ್ಧಿ, ಕುಂಡಾದು ರಸ್ತೆಯ ಪೀಚೆ ಕುಟುಂಬಸ್ಥರ ಮನೆಯ ಹತ್ತಿರ ರಸ್ತೆ ಅಭಿವೃದ್ಧಿ, ಪೇತಾಜೆ – ಪುಲ್ಲಾಜೆ ರಸ್ತೆ ಅಭಿವೃದ್ಧಿ, ಬಂಗಾರಕೋಡಿ – ಚಾಮಕಜೆ ಗಿರಿಜನ ಕಾಲೋನಿ ರಸ್ತೆ ಅಭಿವೃದ್ಧಿ, ಕನ್ನಡ ಪೆರಾಜೆ ರಸ್ತೆ ಅಭಿವೃದ್ಧಿ, ವ್ಯಯಾನಾಟು ಕುಲವಾನ್ ದೇವಸ್ಥಾನ ಅಭಿವೃದ್ಧಿ, ಪುತ್ಯ ಉಳ್ಳಾಕುಲು ದೇವಸ್ಥಾನದ ತಡೆ ಗೋಡೆ ನಿರ್ಮಾಣ, ಅಡ್ಕ ಕುಟುಂಬಸ್ಥರ ಐನ್ ಮನೆ ಪಕ್ಕ ತಡೆಗೋಡೆ, ಪೆರಂಗಾಜೆ ಕುಟುಂಬಸ್ಥರ ಐಎನ್ ಮನೆ ಅಭಿವೃದ್ಧಿ, ಪೆರಾಜೆ ಮಸೀದಿಯ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.
ಇದಕ್ಕು ಮೊದಲು ಚೆಂಬು ಗ್ರಾಮದ ರೆಂಕಿಂಗ್ ಮೊಟ್ಟೆ ಭಾಗದಲ್ಲಿ ಶಾಸಕರ ಅನುದಾನದಲ್ಲಿ 4 ಎಕರೆ ಜಾಗದಲ್ಲಿ ನೂತನ ಕ್ರೀಡಾಂಗಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕಂದಾಯ ನಿರೀಕ್ಷಕರು ಜಾಗದ ದಾಖಲೆಗಳನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದರು.
ಚೆಂಬು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದುರೆ ಪಾಯ ವಿಷ್ಣುಮೂರ್ತಿ ದೇವಳ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದರು.










