



ಮಡಿಕೇರಿ ಮಾ.7 NEWS DESK : ಕೆಲವು ತಿಂಗಳುಗಳ ಹಿಂದೆ ಬಸ್ ಅಪಘಾತದಿಂದ ಹಾನಿಗೊಳಗಾಗಿದ್ದ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಈಗ ಹೊಸ ಮೆರುಗು ಬಂದಿದೆ. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮೈಸೂರಿಗೆ ತೆರಳಿ ಪ್ರತಿಮೆಯನ್ನು ಪರಿಶೀಲಿಸಿದರು. ಮಾ.8 ರಂದು ಪ್ರತಿಮೆ ಮೈಸೂರಿನಿಂದ ಮಡಿಕೇರಿಗೆ ಬರಲಿದ್ದು, ಅದ್ದೂರಿ ಸ್ವಾಗತ ದೊರೆಯಲಿದೆ. ನಂತರ ಅಭಿವೃದ್ಧಿಗೊಂಡಿರುವ ನೂತನ ವೃತ್ತದಲ್ಲಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಅನಾವರಣಗೊಳ್ಳಲಿದ್ದು, ಸಕಲ ಗೌರವ ಸಲ್ಲಿಸಲಾಗುವುದು ಎಂದು ಅನಿತಾ ಪೂವಯ್ಯ ತಿಳಿಸಿದ್ದಾರೆ.











