ಮಡಿಕೇರಿ ಮಾ.12 NEWS DESK : ಮಾಧ್ಯಮ ಸ್ಪಂದನ ತಂಡದಿಂದ ಪಾಲಿಬೆಟ್ಟದ ಮಹಿಳೆಯೊಬ್ಬರಿಗೆ ಅಗತ್ಯವಾದ ವಾಕರ್ ಹಾಗೂ ಅಗತ್ಯ ವಸ್ತುಗಳ ಕಿಟ್ ಅನ್ನು ದಾನಿ ಮೂಲಕ ನೀಡಲಾಯಿತು.
ಎಂ.ಆರ್. ಅನಿಲ್ ಅವರ ಸಹೋದರಿ ಮಣಿ ರಾಘವನ್ ಅವರಿಗೆ ಮಡಿಕೇರಿ ನಗರಸಭೆ ಜೆಡಿಎಸ್ ಸದಸ್ಯ ಎಂ.ಎ. ಮುಸ್ತಫಾ ಅವರು ವಾಕರ್ ಹಾಗೂ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.
ಅಲ್ಲದೆ ಮಣಿ ರಾಘವನ್ ಅವರಿಗೆ ಪ್ರತಿ ತಿಂಗಳು ಅಗತ್ಯ ವಸ್ತುಗಳ ಕಿಟ್, ಔಷಧಿ ವೆಚ್ಚ ನೀಡುವುದಾಗಿ ಭರವಸೆ ನೀಡಿದರು.
ಮಾಧ್ಯಮ ಸ್ಪಂದನ ತಂಡದ ಪುತ್ತಂ ಪ್ರದೀಪ್ ಬಾಲನ್ ಮನವಿ ಹಿನ್ನೆಲೆಯಲ್ಲಿ ಅಗತ್ಯ ನೆರವು ಒದಗಿಸಲಾಯಿತು.
ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪುತ್ತಂ ಪ್ರದೀಪ್ ಬಾಲನ್, ಸಿಂಧೂ ಅನಿಲ್ ಇದ್ದರು.







