ಸುಂಟಿಕೊಪ್ಪ ಮಾ.13 NEWS DESK : ಕೂರ್ಗ್ ವಾಟರ್ ಪಾರ್ಕ್ ವತಿಯಿಂದ 3ನೇ ಹೊನಲು ಬೆಳಕಿನ ಲೆಜೆಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಕುಶಾಲನಗರದ ಜಾತ್ರಾ ಮೈದಾನದಲ್ಲಿ ಐದು ದಿನಗಳ ಕಾಲ ನಡೆಯಿತು.
ಇತ್ತೀಚೆಗೆ ನಡೆದ ಕುಶಾಲನಗರ ಜಾತ್ರಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಐದು ದಿನಗಳ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ರಾಯಲ್ ಗ್ಯಾಲಕ್ಸಿ ತಂಡ ಹಾಗೂ ಹರ್ಷಲ್ ಫ್ರೆಂಡ್ಸ್ ತಂಡಗಳ ನಡುವೆ ನಡೆದು ರಾಯಲ್ಸ್ ಗ್ಯಾಲಕ್ಸಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಹರ್ಷಲ್ ತಂಡವು ದ್ವಿತೀಯ ಸ್ಥಾನ ಪಡೆದರೆ, ಟೀಮ್ ಪೆಪ್ಸಿ ತೃತಿಯ ಸ್ಥಾನ ಹಾಗೂ ವೈಲ್ಡ್ ಕ್ಯಾಟ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ವಿಜೇತ ತಂಡಗಳಿಗೆ ಬಹುಮಾನ ವಿತರಣೆಯನ್ನು ಕ್ರೀಡಾಕೂಟ ಆಯೋಜಕರಾದ ಕೂರ್ಗ್ ವಾಟರ್ ಪಾರ್ಕ್ ಮಾಲೀಕರಾದ ಲಕ್ಷ್ಮಿ ನಾರಾಯಣ, ಕುಶಾಲನಗರ ಪುರಸಭಾ ಸದಸ್ಯ ಪ್ರಮೋದ್ ಮುತ್ತಪ್ಪ, ಅಭಿಯಂತರದ ಸೈಜನ್ ಪೀಟರ್, ಡಿಡಿ ಕಿರಣ್ ಹಾಗೂ ಎಲ್ಲಾ ತಂಡಗಳ ಮಾಲೀಕರು ನಾಯಕರು ಕ್ರೀಡಾಪಟುಗಳು ಇದ್ದರು.









