ಸುಂಟಿಕೊಪ್ಪ ಮಾ.14 NEWS DESK : ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯು ನಡೆಯಿತು.
ಶ್ರೀ ಮಂಜುನಾಥಯ ಮೀನಾಕ್ಷಿಮ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಸಭೆಯನ್ನು ಉದ್ದೇಶಿಸಿ ನಿಕಟ ಪೂರ್ವ ಅಧ್ಯಕ್ಷ ಮನುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸೋಮವಾರಪೇಟೆ ತಾಲೂಕು ಮಂಡಲ ಅಧ್ಯಕ್ಷರಾದ ಗೌತಮ್ ಸಮ್ಮುಖದಲ್ಲಿ ಸುಂಟಿಕೊಪ್ಪ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಸುಂಟಿಕೊಪ್ಪದ ನಗರಾಧ್ಯಕ್ಷರಾಗಿ ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ರಾಜು ಅವರನ್ನು ಆಯ್ಕೆ ಮಾಡಲಾಯಿತು.
ಸೋಮವಾರಪೇಟೆ ಮಂಡಳ ಒಬಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡ ಪಿ.ಆರ್.ಸುನಿಲ್ ಕುಮಾರ್ ಅವರನ್ನು ಯುವ ಮೋರ್ಚಾದ ಅಧ್ಯಕ್ಷರಾದ ವಿಜ್ಞೇಶ್ ಸೇರಿದಂತೆ ಹಿರಿಯರು ಸನ್ಮಾನಿಸಿ, ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಶಾಂತ್ (ಕೋಕ) ವಹಿಸಿದ್ದರು
ಗ್ರಾ.ಪಂ ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ಒಬಿಸಿ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಗ್ರಾಮ ಪಂಚಾಯಿತಿ ಸದಸ್ಯಗಳಾದ ಬಿ.ಎಂ.ಸುರೇಶ್, ಮಂಜುನಾಥ್, ಹಿರಿಯರಾದ ಲೀಲಾ ಮೇದಪ್ಪ, ವಿ.ಎ.ಸಂತೋಷ್ ಹಾಗೂ ಎಲ್ಲಾ ಕಾರ್ಯಕರ್ತರು ಉಪಸ್ಥಿದ್ದರು.