ಮಡಿಕೇರಿ ಮಾ.14 NEWS DESK : ಇತಿಹಾಸ ಪ್ರಸಿದ್ಧ ಕಲ್ಲುಗುಂಡಿಯ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಇಂದು ಮುಹೂರ್ತದ ಕೊಳ್ಳಿ ಕಡಿಯುವ ಮೂಲಕ ಚಾಲನೆ ನೀಡಲಾಯಿತು. ಪ್ರತಿವರ್ಷದಂತೆ ಈ ಬಾರಿ ಕೂಡ ಮಾ.28 ರಿಂದ 30 ರವರೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಮತ್ತು ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಮಾ.21 ರಂದು ಬೆಳಿಗ್ಗೆ ಗೊನೆ ಕಡಿಯುವುದು, ಮಾ.27 ರಂದು ಬೆಳಿಗ್ಗೆ 5.30 ಗಂಟೆಗೆ ದೈವಸ್ಥಾನದಲ್ಲಿ ಗಣಹೋಮ, ಮಾ.28 ರಂದು ರಾತ್ರಿ 7.30 ಗಂಟೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, 9 ಗಂಟೆಗೆ ಮೇಲೇರಿಗೆ ಅಗ್ನಿ ಸ್ಪರ್ಷ, 12.30 ಗಂಟೆಗೆ ಕುಲ್ಚಾಟ ಹೊರಡುವುದು, ಮಾ.29 ರಂದು ಬೆಳಿಗ್ಗೆ 6 ಗಂಟೆಗೆ ಅಗ್ನಿ ಪ್ರವೇಶ, 7 ಗಂಟೆಗೆ ಪ್ರಸಾದ ವಿತರಣೆ, 8 ಗಂಟೆಗೆ ಮಾರಿಕಳ ಪ್ರವೇಶ ಹಾಗೂ ಮಾರಿಕಳದಿಂದ ಬಂದ ನಂತರ ಹರಕೆಯ ಸುರಿಗೆಗಳನ್ನು ಒಪ್ಪಿಸುವುದು. ನಂತರ ಪ್ರಸಾದ ವಿತರಣೆ ಮುಂದುವರೆಯಲಿದೆ.
ಮಾ.30 ರಂದು ಮಧ್ಯಾಹ್ನ 1 ಗಂಟೆಗೆ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಹಾಗೂ ರಕ್ತೇಶ್ವರಿ ದೈವಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಮಾ.28 ರಂದು ರಾತ್ರಿ 9.30 ಗಂಟೆಗೆ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಶ್ರೇಷ್ಠ ಕಲಾವಿದರಿಂದ ವಿಶೇಷ ಕಾರ್ಯಕ್ರಮ “ಕಲ್ಲುಗುಂಡಿಯ ಕಲರವ” ನಡೆಯಲಿದೆ ಎಂದು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಸೇವೆಯನ್ನು ಮಾಡಿಸುವ ಭಕ್ತರು ಕೆ.ಆರ್.ಜಗದೀಶ್ ರೈ (ಅಧ್ಯಕ್ಷರು) 9448501647, ಕೆ.ವಿ.ಮಂಜುನಾಥ್ (ಕಾರ್ಯದರ್ಶಿ) 9448548604, ಬಿ.ಆರ್.ಪದ್ಮಯ್ಯ (ಕೋಶಾಧಿಕಾರಿ) 9448976414 ಹಾಗೂ ಬಿ.ಶಿವರಾಮ (ಕಚೇರಿ ನಿರ್ವಾಹಕ) 9008637924 ನ್ನು ಸಂಪರ್ಕಿಸಬಹುದಾಗಿದೆ. (ಚಿತ್ರ ವರದಿ : ಶರತ್ ಕೀಲಾರು, ಸಂಪಾಜೆ)











