ವಿರಾಜಪೇಟೆ ಮಾ.20 NEWS DESK : ವಿವಿಧತೆಯಲ್ಲಿ ಏಕತೆ ಕಂಡ ದೇಶ ಭಾರತ. ಭೌವ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕು ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವಿರಾಜಪೇಟೆ ಮೀನುಪೇಟೆಯ ಚೈತನ್ಯ ಮಠಪುರದ ಶ್ರೀ ಮುತ್ತಪ್ಪ ದೇವಾಲಯ 80ನೇ ವಾರ್ಷಿಕ ತೆರೆ ಮಹೋತ್ಸವ ಮತ್ತು ನೂತನವಾಗಿ ನಿರ್ಮಿಸಲಾದ ದೇವಾಲಯದ ಮಹಾದ್ವಾರ ಉದ್ಘಾಟಸಿ ಮಾತನಾಡಿದ ಅವರು, ದೇಗುಲಗಳು ಭಕ್ತಿಯ ಶ್ರದ್ಧಾಕೇಂದ್ರಗಳು, ಪೂರ್ವಜರಿಂದ ಪೂಜಿಸಲ್ಪಟ್ಟ ಆಲಯಗಳನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಹಬ್ಬದ ಆಚರಣೆಗಳು, ವಾರ್ಷಿಕ ಉತ್ಸವಗಳು ಜೀವಂತವಾಗಿರಿಸುವು ಸನಾತನ ಹಿಂದೂ ಧರ್ಮದ ಪ್ರತಿಯೋಬ್ಬರ ಕರ್ತವ್ಯವಾಗಬೇಕು ಎಂದರು.
ಧಾರ್ಮಿಕ ಕೇಂದ್ರ ಭಕ್ತಿಯ ಆಲಯಗಳಲ್ಲಿ ನಡೆಯುವ ಭಕ್ತಿ ಪ್ರದಾನ ಆಚರಣೆಗಳಿಂದ ದೇಶವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ದೇವಾಲಯಗಳು ಸನಾತನ ಹಿಂದೂ ಧರ್ಮದ ಪ್ರತೀಕವಾಗಿದೆ. ಭಕ್ತಿ ಪ್ರದಾನವಾಗಿ ಆಚರಿಸುವ ಆಚರಣೆಗಳು, ಸಂಸ್ಕೃತಿ, ಪದ್ದತಿಗಳು, ಅನ್ಯ ಧರ್ಮಕ್ಕೂ ಪರಿಚಯಿಸಬೇಕು. ಈ ಹಿನ್ನೆಲೆಯಲ್ಲಿ ಸರ್ವರೂ ಧರ್ಮ ಪರಿಪಾಲನೆಗೆ ಮುಂದಾಗಬೇಕು ಎನ್ನುವ ಕಲ್ಪನೆ ನಮದಾಗಬೇಕು. ರಾಜ್ಯ ಮತ್ತು ದೇಶದ ಇತರ ಭಾಗಗಳಲ್ಲಿ ಬರದ ಛಾಯೆ ಇರುವುದರಿಂದ ಬರವನ್ನು ನೀಗಿಸಿ ಮಳೆಯಾಗುವಂತೆ ಬೆಳೆಗಳು ಬೆಳೆದು ಸಮೃದ್ಧಿಯಾಗಬೇಕು ಎಂದು ಸರ್ವ ಶಕ್ತನಾದ ದೇವರಲ್ಲಿ ಪಾರ್ಥಿಸುವ ಎಂದು ಹೇಳಿದರು.
ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅದ್ಯಕ್ಷ ಪಿ.ಜಿ.ಸುಮೇಶ್ ಮಾತನಾಡಿ, ದೇಶವು ಬಹು ಸಂಸ್ಕೃತಿಗಳ ದೇಶವಾಗಿದೆ. ಭಿನ್ನ ಸಂಸ್ಕೃತಿಗಳು ಆಚರಣೆಗಳು ಪದ್ದತಿಗಳಿಂದ ದೇಶವು ಸಂಪತ್ಭರಿತವಾಗಿದೆ. ದೇಗುಲ ದೇವಾಲಯಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಅರಿತು ಮುಂದಿನ ತಲೆಮಾರಿಗೆ ಪರಿಚಯ ಮಾಡಿಕೊಡುವಂತಾಗಬೇಕು. ಕೇರಳ ರಾಜ್ಯ ಶ್ರೀ ವೇದಾಭ್ಯಾಸ ವಿದ್ಯಾಪೀಠ ವೇದಾಚಾರ್ಯರಿಂದ ಧರ್ಮದ ಬಗ್ಗೆ ಪ್ರಬೋಧನೆ ಕಾರ್ಯಕ್ರಮ ಈ ಹಿಂದೆ ಏರ್ಪಡಿಸಲಾಗಿತ್ತು. ಅದರ ಭಾಗವಾಗಿ ಇಂದು ದ್ವಿತೀಯ ಅಧ್ಯಾಯವನ್ನು ವೇದಾಚಾರ್ಯ ಅಜಯ್ ಕುಮಾರ್ ಅವರು ನಡೆಸಿಕೊಡಲಿದ್ದಾರೆ. ಧರ್ಮದ ಬಗ್ಗೆ ಮತ್ತು ಸಂಸ್ಕೃತಿಗಳ ಬಗ್ಗೆ ತಿಳಿಯಲಿರುವುದು ಆನೇಕ ವಿಚಾರಗಳು ನಮಗೂ ತಿಳಿಯಬೇಕು. ಧರ್ಮ ಉಳಿಯಬೇಕಾದರೆ ಧರ್ಮದ ತಿರುಳು ಅರಿಯುವುದು ಮುಖ್ಯ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅಯೋಜಿಸಲಾಗಿದೆ.
ದೇವಾಲಯದ ಮಹಾದ್ವಾರ ನಿರ್ಮಾಣಕ್ಕೆ ಸಹಕಾರ ನೀಡಿದ ಮತ್ತು ತೆರೆ ಮಹೋತ್ಸವ ಕ್ಕೆ ಚಾಲನೆ ನೀಡಿದ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಮುತ್ತಪ್ಪ ಕಲಾ ಮಂಟಪದ ಸಭಾಂಗಣ ವೇದಿಕೆಯಲ್ಲಿ ಶ್ರೀ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ರಾಜನ್, ಉಪಾಧ್ಯಕ್ಷ ಸಿ.ಆರ್.ವಾಸು, ಮಾಹದ್ವಾರ ನಿರ್ಮಾಣಕರ್ತರು, ಚಾಮಿ ಕನ್ ಸ್ಟೃಕ್ಸನ್ ನ ಮಾಲೀಕ ಸುರೇಶ್ ಹಾಜರಿದ್ದರು.
ಕೇರಳ ರಾಜ್ಯದ ಶ್ರೀ ವೇದಾಬ್ಯಾಸ ವಿದ್ಯಾಪೀಠ ವೇದಾಚಾರ್ಯ ಶ್ರೀ ಅಜಯ ಕುಮಾರ್ ಅವರಿಂದ ಧನ, ಸಮೃದ್ದಿ, ಉಂಟಾಗಲು ಮಾರ್ಗದರ್ಶನ ಬಗ್ಗೆ ಪ್ರಭೋದನ ಕಾರ್ಯಕ್ರಮ ನಡೆಯಿತು.
ತೆರೆ ಮಹೋತ್ಸವದಲ್ಲಿ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದ್ಯಸ್ಯರು, ಸಹಸ್ರ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









