ಮಡಿಕೇರಿ ಏ.3 NEWS DESK : ತಾಳತ್ತಮನೆ ನೇತಾಜಿ ಯುವಕ ಮಂಡಲದ 32ನೇ ವಾರ್ಷಿಕ ಮಹಾ ಸಭೆಯು ನೇತಾಜಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ.ಕೆ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ವಿವಿಧ ಕಾರ್ಯಚಟುವಟಿಕೆಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಹಿರಿಯ ಸಲಹಾ ಸಮಿತಿ ಸದಸ್ಯ ಗಿರೀಶ್ ತಾಳತ್ತಮನೆ, ಸಂಘ ಬೆಳೆದು ಬಂದದಾರಿ ಹಾಗೂ ಸಂಘದ ಮೂಲ ಉದ್ದೇಶಗಳನ್ನು ಸದಸ್ಯರಿಗೆ ತಿಳಿಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಪ್ರಗತಿಗೆ ಸಹಕರಿಸುವಂತೆ ಕೋರಿದರು.
ಸಂಘದ ಕಾರ್ಯದರ್ಶಿ ಡಿ.ಪಿ.ಮಿಲನ್ ವಾರ್ಷಿಕ ವರದಿಯನ್ನು ವಾಚಿಸಿದರು. ಖಜಾಂಚಿ ಬಿ.ಆರ್.ಯತೀಶ್ ರೈ 2023-24ನೇ ಸಾಲಿನ ಖರ್ಚು ವೆಚ್ಚಗಳ ವರದಿಯನ್ನು ಮಂಡಿಸಿದರು.
ನೂತನ ಸಮಿತಿ ರಚನೆ :: ಸಭೆಯಲ್ಲಿ 2024-25ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೊಂಡಿರ ಪಿ.ಕಾರ್ಯಪ್ಪ, ಉಪಾಧ್ಯಕ್ಷರಾಗಿ ಗಣೇಶ್ ಕೊಕ್ಕಲೆ, ಕಾರ್ಯದರ್ಶಿಯಾಗಿ ಬಿ.ಬಿ.ದಿವೇಶ್ ರೈ, ಸಹ ಕಾರ್ಯದರ್ಶಿಯಾಗಿ ಬಿ.ಆರ್.ಯತೀಶ್ ರೈ, ಖಜಾಂಚಿಯಾಗಿ ಡಿ.ಪಿ.ಮಿಲನ್ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಯಾಗಿ ಕೆ.ಜಿ.ಪ್ರೀತಂ, ಕ್ರೀಡಾಕಾರ್ಯದರ್ಶಿಯಾಗಿ ಬಿ.ಎಸ್.ನಯನ್ ರೈ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎ.ಕಿರಣ್ ಆಯ್ಕೆಯಾದರು.
ಇದೇ ಸಂದರ್ಭ ಯುವಕ ಮಂಡಲದ ಸಲಹಾ ಸಮಿತಿ ಅಧ್ಯಕ್ಷರಾಗಿ ಅರೆಯಂಡ ರಘು ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕಿಯೆಯನ್ನು ಶ್ರೀ ದುರ್ಗಾಭಗವತಿ ದೇವಸ್ಥಾನ ಅಧ್ಯಕ್ಷರಾದ ಸಿ.ಜಿ.ಅಪ್ಪಯ್ಯ ನಡೆಸಿಕೊಟ್ಟರು.