ಮಡಿಕೇರಿ ಏ.3 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ. ಚುನಾವಣೆ, ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು, 21-ಮೈಸೂರು ಲೋಕಸಭಾ ಕ್ಷೇತ್ರರವರೆಗೆ ಸಂಬಂಧಪಟ್ಟ ರಾಜಕೀಯ ಪಕ್ಷ, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಕಡ್ಡಾಯವಾಗಿ ಅನುಮತಿಯನ್ನು ಪಡೆದ ನಂತರ ಕಾರ್ಯಕ್ರಮವನ್ನು ನಡೆಸಬೇಕು.
ಅದಲ್ಲದೇ ಈ ಕಚೇರಿಗೆ ಧಾರ್ಮಿಕ ಕಾರ್ಯಕ್ರಮಗಳು, ಕೌಟುಂಬಿಕ ಕಾರ್ಯಕ್ರಮ (ಮದುವೆ, ಗೃಹ ಪ್ರವೇಶ, ದೇವರ ಪೂಜೆ ಇತ್ಯಾದಿ) (ರಾಜಕೀಯ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಗಳಿಗೆ ಈ ಕಚೇರಿಗೆ ಅರ್ಜಿಗಳು ಸ್ವೀಕೃತವಾಗುತ್ತಿರುತ್ತದೆ. ನಿಯಮಗಳಂತೆ ಧಾರ್ಮಿಕ ಕಾರ್ಯಕ್ರಮಗಳು, ಕೌಟುಂಬಿಕ ಕಾರ್ಯಕ್ರಮಗಳಿಗೆ ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಆ ರೀತಿ ಕಾರ್ಯಕ್ರಮವನ್ನು ನಡೆಸುವವರು ಮಾಹಿತಿಯನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ನೀಡುವಂತೆ ಕೋರಿದೆ.
ಚುನಾವಣೆ ಸಂದರ್ಭದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಮೇಲೆ ನಿಗಾ ವಹಿಸುವಂತೆ ಚುನಾವಣಾ ತಂಡಗಳಿಗೆ ಈಗಾಗಲೇ ನಿರ್ದೇಶನವನ್ನು ನೀಡಿರುವುದರಿಂದ, ಮಾದರಿ ನೀತಿ ಸಂಹಿತೆ ಜಾರಿ ಸಂಬಂಧ ನಿಯೋಜಿಸಿರುವ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವಲೆನ್ಸ್ ತಂಡದವರು ಕಾರ್ಯಕ್ರಮದ ಪರಿಶೀಲನೆಗೆ ಬಂದಾಗ ಕಡ್ಡಾಯವಾಗಿ ಸಹಕರಿಸುವಂತೆ ಎಲ್ಲಾ ಸಾರ್ವಜನಿಕರಲ್ಲಿ ಮೈಸೂರು ಜಿಲ್ಲಾಧಿಕಾರಿ ಹಾಗೂ 21-ಮೈಸೂರು ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ತಿಳಿಸಿದ್ದಾರೆ.
Breaking News
- *ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ : ಇಂಗ್ಲೀಷ್ ಜೊತೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಸಂರಕ್ಷಣೆ ಅಗತ್ಯ : ಡಾ.ದೊಡ್ಡೇಗೌಡ ಅಭಿಮತ*
- *ಸರ್ವರ ಸಹಕಾರದಿಂದ ಮೂರ್ನಾಡುವಿನಲ್ಲಿ ಯಶಸ್ವಿಯಾದ 69ನೇ ಕನ್ನಡ ರಾಜ್ಯೋತ್ಸವದ “ಕನ್ನಡ ಹಬ್ಬ”*
- *ಡಿ.2 ರಿಂದ 8ರ ವರೆಗಿನ ವಾರ ಭವಿಷ್ಯ : ಯಾವ ರಾಶಿಗೆ ಏನು ಫಲ..?*
- *ಕುಶಾಲನಗರ ವಲಯ ಇಸ್ಲಾಮಿಕ್ ಕಲೋತ್ಸವ : ಕೊಡ್ಲಿಪೇಟೆ ಯೂನಿಟ್ ಚಾಂಪಿಯನ್*
- *ಮಡಿಕೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ : ದತ್ತಿ ಪ್ರಶಸ್ತಿ ಪ್ರದಾನ*
- *ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಮನ ಸೆಳೆದ ಔರ-2ಕೆ24 ತಾಂತ್ರಿಕ ಉತ್ಸವ*
- *ಮಡಿಕೇರಿ : ಡಿ.7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ*
- *ಮಡಿಕೇರಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ : ಎಂ.ಪಿ.ಸುಜಾ ಕುಶಾಲಪ್ಪ*
- *ಮದೆನಾಡು ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ನುಡಿಹಬ್ಬ : ವಿದ್ಯಾರ್ಥಿಗಳು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ : ಪಟ್ಟಡ ಶಿವಕುಮಾರ್ ಕರೆ*
- *ಗೋಣಿಕೊಪ್ಪ : ಜಿಎಂಪಿ ಶಾಲಾ ಶತಮಾನೋತ್ಸವ ಸಮಿತಿಯ QR ಕೋಡ್ ಬಿಡುಗಡೆ*