ಮಡಿಕೇರಿ ಏ.3 NEWS DESK : ಮಡಿಕೇರಿ ನಗರಸಭಾ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಸಭೆಯು ನಗರಸಭೆ ಸಭಾಂಗಣದಲ್ಲಿ ನಡೆಯಿತು.
12ಡಿ, ಪಿಡಬ್ಲ್ಯುಡಿ ಮತದಾರರು ಹಾಗೂ ಮತಗಟ್ಟೆ ಕೇಂದ್ರಗಳ ಮೂಲಭೂತ ಸೌಕರ್ಯಗಳು ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳು ಮುಂತಾದ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಯಿತು.
ಸೂಚನೆಗಳನ್ನು ನೀಡಿ ಪ್ರಮುಖವಾಗಿ ಕಡಿಮೆ ಮತದಾನವಾಗಿರುವ ಬಗ್ಗೆ ಮತದಾರರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಿ ಶೇಕಡವಾರು ಮತದಾನದ ಪ್ರಮಾಣವು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಾಗಲು ಕರ್ತವ್ಯ ನಿರ್ವಹಿಸುವಂತೆ ನಿರ್ದೇಶನಗಳನ್ನು ನೀಡಿ ತಿಳಿಸಲಾಯಿತು.








