ಮಡಿಕೇರಿ ಏ.8 NEWS DESK : ಸೋಮವಾರಪೇಟೆ ಸಮೀಪದ ಕೊತ್ನಳಿಯ ಉದ್ಯಮಿ ಹಾಗೂ ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ತಮ್ಮ ಹುಟ್ಟುಹಬ್ಬವನ್ನ ಅನಾಥಾಶ್ರಮದ ಹಿರಿಜೀವಗಳೊಂದಿಗೆ ಆಚರಿಸಿಕೊಂಡರು.
ಮಡಿಕೇರಿಯ ವಿಕಾಸ್ ಜನ ಸೇವಾ ಟ್ರಸ್ಟ್ ನಲ್ಲಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು.
ನಂತರ ಆಶ್ರಮದ ಹಿರಿಯರಿಗೆ ಬಟ್ಟೆ ಹಾಗೂ ಮಧ್ಯಾಹ್ನದ ಊಟವನನ್ನ ನೀಡಿ ಅವರೊಂದಿಗೆ ಊಟ ಮಾಡುವ ಮೂಲಕ ಸರಳತೆಯನ್ನ ಮೆರೆದರು.
ಇದೇ ಸಂದರ್ಭ ಕೊಡಗು ರಕ್ಷಣಾ ವೇದಿಕೆಯ ಸದಸ್ಯರು ಅರಣ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಅರಣ್, ಸೋಮವಾರಪೇಟೆಯ ಅಭಿವೃದ್ಧಿಗಾಗಿ ಸೋಮವಾರಪೇಟೆ ಅಭಿವೃದ್ಧಿ ಹೋರಾಟ ಸಮಿತಿಯನ್ನ ಕಟ್ಟಿಕೊಂಡು ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬರುತ್ತಿದ್ದೇವೆ. ಈ ಭಾರಿ ಹಿರಿಯ ಜೀವಗಳೊಂದಿದೆ ಹುಟುಹಬ್ಬ ಆಚರಿಸಕೊಂಡಿರುವುದಾಗಿ ತಿಳಿಸಿದರು.