ಮಡಿಕೇರಿ ಏ.10 NEWS DESK : ಹಬ್ಬಗಳು ಭಾವೈಕ್ಯ ದ ಸಂದೇಶವನ್ನು ಸಾರುತ್ತದೆ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ನಮ್ಮ ಭಾರತ ಎಂದಿಗೂ ಶಾಂತಿ ನೆಮ್ಮದಿಯನ್ನು ಬಯಸುತ್ತದೆ ಹೊರತು ದ್ವೇಷದ ವಾತಾವರಣವಲ್ಲ ಎಂದು ಹಾಫಿಝ್ ಫಝಲುಲ್ ರೆಹಮಾನ್ ಹೇಳಿದರು.
ನಗರದ ಬದ್ರಿಯಾ ಮಸೀದಿಯಲ್ಲಿ ಈದ್ ನಮಾಝ್ ನೇತೃತ್ವ ವಹಿಸಿದ ನಂತರ ಮಾತನಾಡಿದ ಅವರು, ಪ್ರವಾದಿ ( ಸ) ಅವರು ನೀವು ಎಲ್ಲಿಯವರೆಗೆ ನಿಮ್ಮ ನೆರೆಯವರನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಓರ್ವ ಉತ್ತಮ ವಿಶ್ವಾಸಿಯಾಗಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಉಲ್ಲೇಖಿಸಿದರು.
ನಾಡಿನಲ್ಲಿ ಉತ್ತಮ ಮಳೆ ಬೆಳೆ ಹಾಗೂ ಸಮೃದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಗರದ ಸಿ.ಪಿ.ಸಿ ಲೇ ಔಟ್ ನ ಮಸ್ಜಿದ್ ಉರ್ ರಹ್ಮಾ ಮಸೀದಿ, ಉಮರ್ ಮೌಲವಿ ಭಟ್ಕಲ್ ಮಸೀದಿ, ಅಲೀ ಮುಸ್ಲಿಯಾರ್, ಮಲಬಾರ್ ಜುಮಾಅತ್ ಮಸೀದಿ ಸೇರಿದಂತೆ ನಗರದ ವಿವಿಧ ಮಸೀದಿಗಳಲ್ಲಿ ಈದ್ ನಮಾಝ್ ನಡೆಯಿತು.
ಅಬ್ದುಲ್ ಹಮೀದ್ ಮದನಿ, ಸಲಫಿ ಮಸೀದಿಯಲ್ಲಿ ಸಲಾವುದ್ದೀನ್ ಚುಝೈಲಿ ನೇತೃತ್ವದಲ್ಲಿ ನಡೆಯಿತು.